ಪುತ್ತೂರು : ವಿಷು ಆಚರಣೆಯ ದಿನದಂದೇ ಅಂಬೇಡ್ಕರ್ ಜನ್ಮದಿನವಾಗಿದ್ದು, ಹಬ್ಬಕ್ಕೂ ವಿಶೇಷ ಮಹತ್ವ ಬಂದಿದೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು. ಪುತ್ತೂರು ಪುರಭವನದಲ್ಲಿ ಮಂಗಳವಾರ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 124ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಓದಿನಲ್ಲಿ ಮುಂದಿದ್ದ ಅಂಬೇಡ್ಕರ್, ಅಸ್ಪಶ್ಯತೆ ಕಾರಣದಿಂದ ಹಿಂದುಳಿಯುವ ಸಾಧ್ಯತೆ ಇತ್ತು. ಆದ್ದರಿಂದ ಗುರುಗಳು ಅಂಬೇಡ್ಕರ್ ಎಂಬ ಹೆಸರು ನೀಡಿದರು. ಅದೇ ಹೆಸರು ಇಂದಿಗೂ ಚಿರಸ್ಥಾಯಿಯಾಗಿ ಉಳಿದಿದೆ. ದೇಶದ ಸಂವಿಧಾನ ರೂಪಿಸಿದ ಅಂಬೇಡ್ಕರ್, ಅಸ್ಪಶ್ಯತೆ ಹೋಗಲಾಡಿಸಲು ಶ್ರಮ ವಹಿಸಿದರು ಎಂದರು.ತಾಪಂ ಅಧ್ಯಕ್ಷೆ ಪುಲಸ್ತ್ಯಾ ರೈ ಮಾತನಾಡಿ, ಅಂಬೇಡ್ಕರ್ ಪ್ರತ್ಯೇಕ ಪಂಗಡವನ್ನು ಪ್ರತಿನಿಧಿಸದೇ, ದೇಶವನ್ನೇ ಪ್ರತಿನಿಧಿಸುತ್ತಾರೆ. ಅಂದಿನ ಅಸ್ಪಶ್ಯತೆಯ ಪರಿಣಾಮವನ್ನು ಇಂದಿನ ಸಮಾಜದಲ್ಲೂ ಕಾಣಬಹುದು.
ಅಸ್ಪಶ್ಯತೆ ಹಾಸುಹೊಕ್ಕಾಗಿದ್ದ ದಿನಗಳಲ್ಲಿ ಬಾಳಿದ ಭೀಮರಾವ್ ಅಂಬೇಡ್ಕರ್, ದೇಶಕ್ಕೆ ಮಾದರಿಯಾಗಿ ಬೆಳೆದು ನಿಂತಿದ್ದಾರೆ. ಮೀಸಲಾತಿಯನ್ನು ಹಿಂದುಳಿದವರ ಏಳಿಗೆಗಾಗಿ ರೂಪಿಸಲಾಯಿತು. ಅದು ಕೇವಲ 10-15 ವರ್ಷಗಳಿಗೆ ಮಾತ್ರ ಸೀಮಿತ ಆಗಬೇಕು. ಸಮಾಜವನ್ನು ಒಡೆದು ಆಳುವ ನೀತಿಗೆ ಮೀಸಲಾತಿ ಬಲಿಯಾಗ ಬಾರದು ಎಂದು ಅಂದೇ ಹೇಳಿದ್ದಾರೆ ಎಂದರು.
ನಗರಸಭೆ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮಾತನಾಡಿ, ಸಂವಿಧಾನ ಪವಿತ್ರ ಗ್ರಂಥ. ಶೋಷಿತ ವರ್ಗದವರ ಪರ ಬೆಳಕು ಮೂಡಿಸಿದ ಅಂಬೇಡ್ಕರ್, ಸಂವಿಧಾನ ದುರುಪಯೋಗ ಆಗದಂತೆ ಎಚ್ಚರಿಸಿದ್ದಾರೆ ಎಂದರು.ಉಪನ್ಯಾಸ ನೀಡಿದ ವಕೀಲ ಜನಾರ್ದನ್, ಅಂಬೇಡ್ಕರ್ ಚಿಂತನೆ ಇಲ್ಲದೇ ಇರುತ್ತಿದ್ದರೆ ಹಿಂದುಳಿದವರು ಮುಖ್ಯವಾಹಿನಿಗೆ ಸೇರಲು ಸಾಧ್ಯ ಆಗುತ್ತಿರಲಿಲ್ಲ ಎಂದರು.
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಖಾ ನಾಗರಾಜ್ ಪಟ್ಟೆ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಆಯುಕ್ತ ಬಸವರಾಜ್ ಮಾತನಾಡಿದರು. ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬೆಟ್ಟ ಪಿ. ಈಶ್ವರ ಭಟ್, ತಾಪಂ ಇಓ ಜಗದೀಶ್, ಡಿವೈಎಸ್ಪಿ ಭಾಸ್ಕರ್ ರೈ, ನಗರಸಭೆ ಅಧ್ಯಕ್ಷೆ ರೇಖಾ ಶೆಟ್ಟಿ ಉಪಸ್ಥಿತರಿದ್ದರು. ತಹಸೀಲ್ದಾರ್ ಎಂ.ಟಿ.ಕುಳ್ಳೇಗೌಡ ಸ್ವಾಗತಿಸಿ, ತಾಲೂಕು ಸಮಾಜ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ರಾಮಕೃಷ್ಣ ಭಟ್ ಕೆ ವಂದಿಸಿದರು. ಕಾರ್ಮಿಕ ಇಲಾಖೆಯ ಚಿದಾನಂದ ಕಾಮತ್, ಕೃಷ್ಣ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.