ನವದೆಹಲಿ: ಕಳೆದ ಎರಡು ತಿಂಗಳುಗಳಿಂದ ಅಜ್ಞಾತರಾಗಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಬುಧವಾರ ರಾತ್ರಿ ದೆಹಲಿಗೆ ವಾಪಾಸ್ಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಹತ್ವದ ಬಜೆಟ್ ಅಧಿವೇಶನ ಆರಂಭವಾದ ಫೆ.22ರಿಂದ ರಾಹುಲ್ ಅವರು ನಾಪತ್ತೆಯಾಗಿದ್ದಾರೆ. ಅವರು ವಿದೇಶಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.
ಇಂದು ವಾಪಾಸ್ ಆಗಲಿರುವ ಅವರು ಎ.19ರಂದು ನಡೆಯಲಿರುವ ಭೂಸ್ವಾಧೀನ ಮಸೂದೆ ವಿರುದ್ಧದ ಬೃಹತ್ ಸಮಾವೇಶದ ನೇತೃತ್ವವನ್ನು ವಹಿಸಿಕೊಳ್ಳಲಿದ್ದಾರೆ.
ಇನ್ನೊಂದೆಡೆ ರಾಹುಲ್ ವಿರುದ್ಧ ಕೆಲ ಕಾಂಗ್ರೆಸ್ ಮುಖಂಡರು ಬಹಿರಂಗವಾಗಿಯೇ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಮಾಜಿ ದೆಹಲಿ ಸಿಎಂ ಶೀಲಾ ದೀಕ್ಷಿತ್ ಅವರು ‘ರಾಹುಲ್ ನಾಯಕತ್ವದ ಮೇಲೆ ಹಲವಾರು ಪ್ರಶ್ನೆಗಳಿವೆ, ಪಕ್ಷಕ್ಕೆ ಸೋನಿಯಾ ಗಾಂಧಿಯವರೇ ದಿಕ್ಕು’ ಎಂದಿದ್ದರು.
ಒಟ್ಟಿನಲ್ಲಿ ನಾಪತ್ತೆಯಾಗಿರುವ ರಾಹುಲ್ ಗಾಂಧಿ ಇಂದು ವಾಪಸ್ಸಾಗುತ್ತಿದ್ದಾರೆ ಎಂಬುದು ಅವರ ಪಕ್ಷದ ಕಾರ್ಯಕರ್ತರಲ್ಲಿ ತುಸು ಉಲ್ಲಾಸವನ್ನು ಮೂಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.