ಬೆಳ್ತಂಗಡಿ : ಮಡಂತ್ಯಾರು ಗ್ರಾ.ಪಂ. ವ್ಯಾಪ್ತಿಯ ಮಾರಿಗುಡಿ ಅಂಗನವಾಡಿ ಕೇಂದ್ರದ ಅವ್ಯವಸ್ಥೆಯನ್ನು ಕಂಡು ಮಕ್ಕಳ ಪೋಷಕರು ಅಕ್ರೋಶಗೊಂಡ ಘಟನೆ ಸೋಮವಾರ ನಡೆದಿದೆ.
ಮಾರಿಗುಡಿ ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಅನೇಕ ಭಾರೀ ಇಂತಹ ಘಟನೆಗಳು ಮುಂದುವರಿದಿದ್ದು, ಇದೀಗ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರದಂದು ಮಕ್ಕಳಿಗೆ ಆಹಾರ ತಯಾರುಮಾಡಿದ್ದ ಪಾತ್ರೆಯನ್ನು ತೊಳೆಯದೆ ಸೋಮವಾರದವರೆಗೆ ಹಾಗೆಯೇ ಇಟ್ಟು ಆ ಪಾತ್ರೆಯಲ್ಲಿ ಹುಳಗಳು ಸೃಷ್ಟಿಯಾಗಿದ್ದು ಇದ್ದನ್ನು ಕಂಡ ಪೋಷಕರು ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯನ್ನು ಮತ್ತು ಸಹಾಯಕಿಯ ವಿರುದ್ದ ಆಕ್ರೋಶಗೊಂಡು ಸ್ಥಳದಲ್ಲಿ ಎಲ್ಲಾ ಮಕ್ಕಳ ಪೋಷಕರು ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಭೇಟಿ ನೀಡಬೇಕು ಎಂದು ಒತ್ತಾಯಿಸಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಗ್ರಾ.ಪಂ. ಅಧ್ಯಕ್ಷರನ್ನು ಪೋಷಕರು ತರಟೆಗೆ ತೆಗೆದು ಕೊಂಡು ಮೇಲಾಧಿಕಾರಿಗಳಿಗೆ ತಿಳಿಸಬೇಕು. ಮತ್ತು ಮುಂದೆ ಈ ರೀತಿಯ ವ್ಯವಸ್ಥೆಗಳು ಮುಂದುವರಿಯದಂತೆ ಸೂಚಿಸಬೇಕು ಎಂದು ತಿಳಿಸಿದರು.
ಅನೇಕ ಸಮಯದಿಂದಲೂ ಇತಂಹ ಘಟನೆಗಳು ಮುಂದುವರಿಯುತ್ತಿದೆ, ಈ ಬಗ್ಗೆ ಗ್ರಾಮ ಸಭೆಯಲ್ಲಿ ಅನೇಕ ಭಾರೀ ತಿಳಿಸಿದ್ದೇವು ಆದರೆ ಈ ವರೆಗೂ ಯಾವುದೇ ಕ್ರಮಕೈಗೊಳ್ಳಲ್ಲಿ ಎಂದು ಮಕ್ಕಳ ಪೋಷಕರು ಗ್ರಾಮ ಪಂಚಾಯತ್ ಅಧ್ಯಕ್ಷರಲ್ಲಿ ತಿಳಿಸಿದರು.
ಇದೇ ರೀತಿಯಾಗಿ ಅವ್ಯವಸ್ಥೆ ಮುಂದುವರಿದರೇ ಮುಂದಕ್ಕೆ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸುವುದಿಲ್ಲ ಎಂದು ಮಕ್ಕಳ ಪೋಷಕರು ತಿಳಿಸಿದರು. ಸ್ಥಳಕ್ಕೆ ಮೇಲ್ವಿಚಾರಕಿ ರತ್ನಾವತಿ ಅವರು ಭೇಟಿ ಕೊಟ್ಟು ಮಕ್ಕಳ ಪೋಷಕರಿಂದ ಮಾಹಿತಿ ಪಡೆದರು. ಈ ವೇಳೆ ಅವರು ಅಂಗನವಾಡಿ ಕಾರ್ಯಕರ್ತೆಯನ್ನು ತರಾಟೆಗೆ ತೆಗೆದುಕೊಂಡು ಮುಂದಕ್ಕೆ ಈ ರೀತಿಯ ಘಟನೆಗಳು ನಡೆಯಬಾರದು, ಇದೇ ರೀತಿ ಮುಂದುವರಿದ್ದರೇ ತಕ್ಷಣವೇ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.