ಬೆಳ್ತಂಗಡಿ : ಬಿಜೆಪಿ ಸರಕಾರದ ಅವಧಿಯಲ್ಲಿ ರೈತರಿಗೆ ಬೇಕಾದ ಯೋಜನೆಗಳು, ಪಡಿತರ ಸೌಲಭ್ಯ, ಬಿಪಿಎಲ್ಕಾರ್ಡ್ ಕುಟುಂಬಗಳಿಗೆ ಇರುವ ಸೌಲಭ್ಯ, 108 ಸೇವೆ, ನಮ್ಮ ಗ್ರಾಮ ನಮ್ಮ ರಸ್ತೆಯಂತಹ ಯೋಜನೆಗಳನ್ನು ಜಾರಿಗೊಳಿಸಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಕಾರಣವಾದರೆ ಇದನ್ನು ರದ್ದುಗೊಳಿಸುವ ಒಂದೇ ಕೆಲಸದಲ್ಲಿ ಕಾಂಗ್ರೆಸ್ ಸರಕಾರ ತಲ್ಲೀನವಾಗಿದೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಆರೋಪಿಸಿದರು.
ಅವರು ಶನಿವಾರ ಸಂಜೆ ನಾರಾವಿಯಲ್ಲಿ ಜಿ. ಪಂ.ತಾ. ಪಂ.ಚುನಾವಣಾ ಪ್ರಚಾರಾರ್ಥ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿರೈತರಆತ್ಮಹತ್ಯೆತಡೆಯುವಲ್ಲಿ ಸರಕಾರ ವಿಫಲವಾಗಿದ್ದು ರಾಜ್ಯದಲ್ಲಿ ಅಶಾಂತಿ ಸೃಷ್ಠಿಸುವ ಉದ್ದೇಶದಿಂದರಾಜಕೀಯ ಲಾಭ ಪಡೆಯಲು ಟಿಪ್ಪುಜಯಂತಿಯನ್ನು ಆಚರಿಸಲು ಉದ್ದೇಶಿಸಿದ ಕಾಂಗ್ರೆಸ್ ಜನರನ್ನು ನೋವಿನಲ್ಲಿ ಇರುವಂತೆ ಮಾಡಿದೆ. 94ಸಿಯಲ್ಲಿ ವಿಳಂಬ, ಕಸ್ತೂರಿರಂಗನ್ ಬಗ್ಗೆ ನಿರ್ಲಕ್ಷ್ಯವಹಿಸುತ್ತಿದ್ದು ಯಡಿಯೂರಪ್ಪರವರು ಮುಖ್ಯಮಂತ್ರಿಗಳಿದ್ದಾಗ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದು ಇದಕ್ಕೆ ಉದಾಹರಣೆಯಾಗಿ ನಾರಾವಿ ಸೂರ್ಯನಾರಾಯಣ ದೇವಸ್ಥಾನಕ್ಕೆ ಒಂದು ಕೋಟಿ ರೂ. ಅನುದಾನ ನೀಡಿರುವುದೇ ಸಾಕ್ಷಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಿಯಾಚಿನ್ನಲ್ಲಿ ಮಡಿದ ಸೈನಿಕರಆತ್ಮಕ್ಕೆ ಶಾಂತಿ ಸಿಗುವಂತೆ 1 ನಿಮಿಷ ಮೌನಆಚರಿಸಲಾಯಿತು.ಸಭೆಯಲ್ಲಿ ನಾರಾವಿ ಬಿಜೆಪಿ ಜಿ. ಪಂ. ಅಭ್ಯರ್ಥಿ ಜಯಂತ್ ಕೊಟ್ಯಾನ್, ಮುಖಂಡರುಗಳಾದ ರಾಘವಪುತ್ರನ್, ಯಶೋಧ, ಉಮೇಶ್ ನಡ್ತಿಕಲ್ಲು, ಉದಯ ಹೆಗ್ಡೆ, ಮೋಹನ್ಅಂಡಿಂಜೆ, ಉಮೇಶ್ ಮುಂತಾದವರು ಉಪಸ್ಥಿತರಿದ್ದರು.
ನಂತರ ನಾರಾವಿ ಸುತ್ತಮುತ್ತ ಪ್ರದೇಶದಲ್ಲಿ ಬಿಜೆಪಿ ಪಕ್ಷದ ಪರ ಸುನಿಲ್ ಕುಮಾರ್ ಮತಯಾಚನೆ ನಡೆಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.