ಬೆಳ್ತಂಗಡಿ : ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷೆ ಸಿ.ಕೆ. ಚಂದ್ರಕಲಾ ಅವರು ಇತ್ತೀಚೆಗೆ ಸರಳಿಕಟ್ಟೆ ಸರಕಾರಿ ಶಾಲೆಗೆ ಭೇಟಿ ನೀಡಿ ಶಾಲೆಯ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದರು.
ಪರಿಶೀಲನೆ ವೇಳೆ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ರೂ. 320/- ಮತ್ತು ವಿದ್ಯಾರ್ಥಿನಿಯರಿಂದರೂ. 270/- ಶುಲ್ಕ ಪಡೆದುಕೊಂಡಿದ್ದರೂ 17 ರೂಪಾಯಿ ರಶೀದಿ ನೀಡಲಾಗಿರುವುದನ್ನು, ವರ್ಗಾವಣೆ ದೃಢಪತ್ರಕ್ಕೆ ಪ್ರತಿವಿದ್ಯಾರ್ಥಿಗಳಿಂದ 100 ರೂಪಾಯಿ ಪಡೆದಿರುವುದನ್ನು, ಹಾಜರಿಪುಸ್ತಕದಲ್ಲಿ ಹಾಜರಿ ಬರೆಯದೇ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯನ್ನು ಪೂರ್ತಿಯಾಗಿ ಬಿಸಿಯೂಟ ಪುಸ್ತಕದಲ್ಲಿ ನಮೂದಿಸಲಾರುವುದನ್ನು, ೮ನೇ ತರಗತಿ ಮಕ್ಕಳಿಂದ ಪ್ರವಾಸಕ್ಕೆಂದು ಅಧಿಕ ಹಣ ಪಡೆದು ವಿದ್ಯಾರ್ಥಿಗಳಿಗೆ ಉಳಿಕೆ 50 ರೂಪಾಯಿ ನೀಡದೆ ವಂಚಿಸಿರುವುದನ್ನು ಮಕ್ಕಳು ದೂರಿದರು.
ಹಾಜರಾತಿ 219 ಇದ್ದರೂ ಬಿಸಿಯೂಟ ಪುಸ್ತಕದಲ್ಲಿ 258 ಎಂದು ಬರೆಯಲಾಗಿತ್ತು. ಕ್ಲಾಸ್ರೂಂನಲ್ಲಿ ಹರಿದ ಪುಸ್ತಕಗಳ ಕಸ ಕಡ್ಡಿಗಳ ರಾಶಿ ಬಿದ್ದಿತ್ತು. ಮುಖ್ಯ ಶಿಕ್ಷಕರು ಇಲ್ಲದ ಕಾರಣ ಸಹಶಿಕ್ಷಕರು ಇಲಾಖಾ ಅನುದಾನದ ಖರ್ಚಿನ ವಿವರದ ದಾಖಲೆ ಪುಸ್ತಕವನ್ನು ನೀಡದ ಕಾರಣ ಚಂದ್ರಕಲಾ ಅವರು ಅಧ್ಯಾಪಕರನ್ನು ತರಾಟೆಗೆ ತೆಗೆದುಕೊಂಡರು.
ಪ್ರೌಢಶಾಲೆಯ 10ನೇ ತರಗತಿ ಮಕ್ಕಳು ಮಧ್ಯಾಹ್ನ ಬಿಸಿಯೂಟ ಸೇವಿಸದೆ ಮನೆಗೆ ತೆರಳಿದ್ದರು. ಪುಸ್ತಕದಲ್ಲಿ ಎಲ್ಲಾ ಮಕ್ಕಳು ಊಟ ಮಾಡಲಾಗಿದೆ ಎಂದು ನಮೂದಿಸಲಾಗಿತ್ತು. ವಿದ್ಯಾರ್ಥಿನಿಯರ ಶೌಚಾಲಯ ಸ್ವಚ್ಛತೆ ಇಲ್ಲದಿರುವ ಬಗ್ಗೆ ನೀರಿನ ಸಮಸ್ಯೆ ಬಗ್ಗೆ ಹೇಳಿಕೊಂಡರು.
ಈ ಸಂದರ್ಭ ಬೆಳ್ತಂಗಡಿ ತಾಲೂಕು ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷರಾದ ಶ್ರೀಮತಿ ಗೀತಾರಾಮಣ್ಣಗೌಡ, ಬಾರ್ಯಕ್ಷೇತ್ರ ತಾಲೂಕು ಪಂಚಾಯತ್ ಸದಸ್ಯ ಮಂಜುನಾಥ ಸಾಲ್ಯಾನ್ ಜೊತೆಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.