×
Home About Us Advertise With s Contact Us

ಐಟಿ ಕಾಯ್ದೆಯ ಸೆಕ್ಷನ್ 66(ಎ) ರದ್ಧತಿಗೆ ಸುಪ್ರೀಂ ಆಗ್ರಹ

supreemನವದೆಹಲಿ: ಆನ್‌ಲೈನ್‌ನಲ್ಲಿ ಆಕ್ಷೇಪಾರ್ಹ ಕಾಮೆಂಟ್ ಹಾಕಿದವರನ್ನು ಬಂಧಿಸಲು ಪೊಲೀಸರಿಗೆ ಅಧಿಕಾರ ನೀಡಿದ್ದ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66(ಎ)ನ್ನು ರದ್ದುಗೊಳಿಸುವಂತೆ ಸುಪ್ರೀಂಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ.

ಈ ಸೆಕ್ಷನ್ ಅಸಂವಿಧಾನಿಕ ಮತ್ತು ಆನ್‌ಲೈನ್ ಬಳಕೆದಾರರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇದು ಧಕ್ಕೆ ತರುತ್ತದೆ. ಮೂಲಭೂತ ಹಕ್ಕಿನ ಉಲ್ಲಂಘಣೆಯಾಗಿದೆ ಎಂದು ಸುಪ್ರೀಂ ಅಭಿಪ್ರಾಯಪಟ್ಟಿದೆ.

ಐಟಿ ಕಾಯ್ದೆಯ ಸಕ್ಷೆನ್ 66(ಎ) ತುಂಬಾ ಸಂದಿಗ್ಧ ಮತ್ತು ಸಂವಿಧಾನದ 19(1)ಎ ಪರಿಚ್ಛೇಧದ ಸ್ಪಷ್ಟ ಉಲ್ಲಂಘಣೆಯಾಗಿದೆ ಎಂದು ನ್ಯಾ. ಜೆ.ಚೆಲಮೇಶ್ವರ್ ಮತ್ತು ರೋಹಿಂಗ್ಟನ್ ನಾರಿಮನ್ ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಅಲ್ಲದೇ ಆ ಸೆಕ್ಷನ್‌ನ ರದ್ಧತಿಗೆ ಸೂಚಿಸಿದೆ.

ಹಲವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ಮಾಡಿ ಸುಪ್ರೀಂ ಈ ಮಹತ್ವದ ತೀರ್ಪನ್ನು ಘೋಷಿಸಿದೆ.

 

Recent News

Back To Top
error: Content is protected !!