ಬೆಳ್ತಂಗಡಿ: ಈ ಬಾರಿಯ ಜಿ.ಪಂ., ತಾ.ಪಂ. ಚುನಾವಣೆಗೆ ಹಳೆ, ಹೊಸ ಆಕಾಂಕ್ಷಿಗಳ ದಂಡೇ ಇದ್ದರೂ ಕಾಂಗ್ರೆಸ್ ಪಕ್ಷ ಮಾತ್ರ ಹೊಸ ಮುಖಗಳಿಗೆ ಟಿಕೇಟ್ ನೀಡುವ ಪ್ರಯೋಗಕ್ಕೆ ಸಿದ್ದವಾಗಿದೆ. ಇದರ ಪರಿಣಾಮ ಏನಾಗಬಹುದೆಂದು ನೋಡಲು ಫೆ. 23ರ ವರೆಗೆ ಕಾದು ನೋಡಬೇಕಿದೆ.
ಕಾಂಗ್ರೆಸ್ ಏಳು ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳಿಗೆ ಮಾತ್ರ ಹಳಬರಿಗೆ ಟಿಕೇಟ್ ನೀಡಿದೆ. 26 ತಾಲೂಕು ಪಂಚಾಯತ್ ಕ್ಷೇತ್ರಗಳಿಗೆ ಹೊಸಮುಖಗಳನ್ನೇ ಕಣಕ್ಕಿಳಿಸಿದೆ.
ತಾಲೂಕಿನ ನಾರಾವಿ ಹಾಗೂ ಕಣಿಯೂರು ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಹಳಬರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ನಾರಾವಿ ಕ್ಷೇತ್ರದಿಂದ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್ ಹಾಗೂ ಕಣಿಯೂರು ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಕೆ.ಸಾಹುಲ್ ಹಮೀದ್ ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದಾರೆ. ಉಳಿದಂತೆ ಅಳದಂಗಡಿ ಕ್ಷೇತ್ರದ ಶೇಖರ್ ಕುಕ್ಕೇಡಿ, ಕುವೆಟ್ಟು ಕ್ಷೇತ್ರದ ಶರಲ್ ಜಾನೆ ನರೊನಾ, ಲಾಲ ಕ್ಷೇತ್ರದ ಶೋಭಾ ಎನ್. ಗೌಡ, ಉಜಿರೆ ಕ್ಷೇತ್ರದ ನಮಿತಾ, ಧರ್ಮಸ್ಥಳ ಕ್ಷೇತ್ರದ ಬಿ. ರಮೇಶ್ ಹೊಸಮುಖಗಳು.
ತಾ.ಪಂ.ನ ಎಲ್ಲಾ ಕ್ಷೇತ್ರಗಳಿಗೆ ಹೊಸಮುಖ: ತಾಲೂಕು ಪಂಚಾಯತ್ನ ಎಲ್ಲಾ 26 ಮಂದಿ ಅಭ್ಯರ್ಥಿಗಳೂ ಕೂಡಾ ತಾಲೂಕು ಪಂಚಾಯತ್ ಚುನಾವಣೆಯನ್ನು ಮೊದಲ ಬಾರಿ ಎದುರಿಸುತ್ತಿದ್ದಾರೆ. ನಾರಾವಿಯಿಂದ ರೂಪಲತಾ, ವೇಣೂರಿನಿಂದ ಸತೀಶ್ ಹೆಗ್ಡೆ, ಹೊಸಂಗಡಿಯಿಂದ ಓಬಯ್ಯ, ಅಳದಂಗಡಿಯಿಂದ ವಿನುಷ ಕುಮಾರಿ, ಅಂಡಿಂಜೆಯಿಂದ ಶುಭಕರ ಪೂಜಾರಿ,ಶಿರ್ಲಾಲಿನಿಂದ ಜಯಶೀಲ, ಪಡಂಗಡಿಯಿಂದ ಸುಶೀಲ, ಲಾಲದಿಂದ ವಸಂತ ಪೂಜಾರಿ, ನಡದಿಂದ ಹೇಮಾವತಿ, ಮಿತ್ತಬಾಗಿಲಿನಿಂದ ಜಯರಾಮ, ಉಜಿರೆಯಿಂದ ಇಬ್ರಾಹಿಂ, ಮುಂಡಾಜೆಯಿಂದ ಪದ್ಮಾವತಿ, ಚಾರ್ಮಾಡಿಯಿಂದ ಯಶೋದರ ಪೂಜಾರಿ, ನೆರಿಯದಿಂದ ವಿ.ಟಿ.ಸೆಬಾಸ್ಟಿನ್, ಧರ್ಮಸ್ಥಳದಿಂದ ಸುರೇಖಾ, ಕೊಕ್ಕಡದಿಂದ ದಯಾನಂದ, ಕಳೆಂಜದಿಂದ ಯಶೋಧಾ, ಅರಸಿನಮಕ್ಕಿಯಿಂದ ದಿವ್ಯಜ್ಯೋತಿ, ಉರುವಾಲಿನಿಂದ ಹೇಮಲತಾ, ಇಳಂತಿಲದಿಂದ ಮನೋಹರ ಕುಮಾರ್, ತಣ್ಣೀರುಪಂತದಿಂದ ಕೇಶವತಿ, ಬಾರ್ಯದಿಂದ ಸುಜಾತ ರೈ, ಮಾಲಾಡಿಯಿಂದ ಪದ್ಮನಾಭ ಸಾಲ್ಯಾನ್, ಮಡಾಂತ್ಯರಿನಿಂದ ಬೇಬಿ, ಕುವೆಟ್ಟಿನಿಂದ ಗೋಪಿನಾಥ್ ನಾಯಕ್, ಕಳಿಯದಿಂದ ಪ್ರವೀಣ್ ಗೌಡ ಸ್ಪರ್ಧಿಸುತ್ತಿದ್ದಾರೆ.
ಈ ಪೈಕಿ ಮಾಲಾಡಿಯ ಪದ್ಮನಾಭ ಸಾಲ್ಯಾನ್, ವೇಣೂರಿನ ಸತೀಶ್ ಹೆಗ್ಡೆ, ಇಳಂತಿಲದ ಮನೋಹರ್ ಕುಮಾರ್, ಕುವೆಟ್ಟಿನ ಗೋಪಿನಾಥ್ ನಾಯಕ್, ತಣ್ಣೀರುಪಂತದ ಕೇಶವತಿ ಈ ಹಿಂದೆ ಗ್ರಾಮ ಪಂಚಾಯತ್ ಅಧ್ಯಕ್ಷರುಗಳಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವುದು ವಿಶೇಷವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.