ಬೆಳ್ತಂಗಡಿ : ರೋಟರಿ ಜಿಲ್ಲೆ 3180 ಇದರ ಭಾಗವಾಗಿರುವ ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಇದೇ ಮೊದಲ ಬಾರಿ ಆರ್.ಸಿ.ಸಿ. ಕ್ಲಬ್ಗಳ ಜಿಲ್ಲಾ ಸಮ್ಮೇಳನ ಫೆ. 13 ಮತ್ತು 14 ರಂದು ಬೆಳ್ತಂಗಡಿಯ ಕಿನ್ಯಮ್ಮ ಯಾನೆ ಗುಣವತಿಯಮ್ಮ ಸಭಾಭವನದಲ್ಲಿ ನಡೆಯಲಿದೆ. ಎಂದು ಜಿಲ್ಲಾ ಸಮ್ಮೇಳನದ ಚೇರಮನ್ ಡಿ. ಎಂ. ಗೌಡ ತಿಳಿಸಿದರು.
ಅವರು ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಬೆಳ್ತಂಗಡಿ ರೋಟರಿ ಕ್ಲಬ್ನ 4 ಆರ್.ಸಿ.ಸಿ.ಗಳು ಇದ್ದು, ರೋಟರಿ ಕ್ಲಬ್, ಬೆಳ್ತಂಗಡಿ, ಮುಂಡಾಜೆ, ನೆರಿಯ, ಚಾರ್ಮಾಡಿ – ಕಕ್ಕಿಂಜೆ ಮತ್ತು ಸತ್ಯನಪಲ್ಕೆ – ಕಲ್ಮಂಜ ಆರ್ಸಿಸಿ ಇವುಗಳ ಸಂಯಕ್ತ ಆಶ್ರಯದಲ್ಲಿ ಈ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. 8 ಕಂದಾಯ ಜಿಲ್ಲೆಗಳನ್ನು ಒಳಗೊಂಡಿ
ದ್ದು 66 ಆರ್.ಸಿ.ಸಿ. ಕ್ಲಬ್ಗಳಿವೆ. ಸಮ್ಮೇಳನದಲ್ಲಿ ಸದಸ್ಯರಿಗೆ ಸಂಘಟನೆ, ಗ್ರಾಮೀಣ ಪರಿಸರಕ್ಕೆ ಬೇಕಾದಂತಹ ಮಾಹಿತಿಯನ್ನು ನೀಡಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮವನ್ನು ಫೆ. 13 ರಂದು ಸಂಜೆ ಜೋನ್ 5ರ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ರಾಮಕೃಷ್ಣ ಮಲ್ಲಾರ್ ಉದ್ಘಾಟಿಸಲಿದ್ದಾರೆ. ಆರ್.ಸಿ.ಸಿ. ಸದಸ್ಯರಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಫೆ. 14 ರಂದು ಬೆಳಿಗ್ಗೆ 9-30 ಕ್ಕೆ ರೋಟರಿ ಜಿಲ್ಲೆ 3180ರ ಗವರ್ನರ್ ಡಾ| ಭರತೇಶ್ ಆದಿರಾಜ್ ಅವರು 17ನೇ ಜಿಲ್ಲಾ ಆರ್.ಸಿ.ಸಿ. ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ನಿವೃತ್ತ ಮೇ|ಜ| ಎಂ. ವಿ. ಭಟ್ ವಹಿಸಲಿದ್ದು, 2016-17ರ ರೋಟರಿ ಜಿಲ್ಲೆ 3181ರ ನಿಯೋಜಿತ ಗವರ್ನರ್ ಡಾ| ನಾಗಾರ್ಜುನ್, ರೋಟರಿ ಜಿಲ್ಲೆ 3142ರ ನಿಯೋಜಿತ ಗವರ್ನರ್ ಡಿ. ಎಸ್. ರವಿ, ಜೋನ್ 5ರ ಅಸಿಸ್ಟೆಂಟ್ ಗವರ್ನರ್ ರಾಮಕೃಷ್ಣ ಮಲ್ಲಾರ, ಜಿಲ್ಲಾ ಆರ್.ಸಿ.ಸಿ. ಸಭಾಪತಿ ಯಶವಂತ ಪಟವರ್ಧನ್, ಜಿಲ್ಲಾ ಆರ್.ಸಿ.ಸಿ. ಪ್ರತಿನಿಧಿ ವೆಂಕಟೇಶ್ವರ ಭಟ್, ಜಿಲ್ಲಾ ಉಪಸಭಾಪತಿ ಕುಮಾರಸ್ವಾಮಿ ಉಪಸ್ಥಿತರಿರುವರು.
ಸಂಧ್ಯಾ ಶೆಣೈ ಅವರಿಂದ ಜೀವನದಲ್ಲಿ ಹಾಸ್ಯ, ಶ್ರೀಪಡ್ರೆಯವರಿಂದ ಮಳೆ ಕೊಯ್ಲು ಮತ್ತು ಪ್ರತಾಪಸಿಂಹ ನಾಯಕ್ ಅವರಿಂದ ಪರಿಣಾಮಕಾರಿ ನಾಯಕತ್ವ – ಸಂಘಟನೆ ಬಗ್ಗೆ ವಿಚಾರ ಗೋಷ್ಟಿ ನಡೆಯಲಿವೆ. ಸಮಾರೋಪ ಸಮಾರಂಭದಲ್ಲಿ ರೋಟರಿ ಜಿಲ್ಲಾ ಗವರ್ನರ್ ಭರತೇಶ್ ಆದಿರಾಜ್ ಅವರು ಜಿಲ್ಲಾ ಪ್ರಶಸ್ತಿಗಳನ್ನು ವಿತರಣೆ ಮಾಡಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಮೇ|ಜ| ಎಂ. ವಿ. ಭಟ್, ಜಿಲ್ಲಾ ಸಮ್ಮೇಳನ ಖಜಾಂಚಿ ಅನಂತ ಭಟ್ ಮಚ್ಚಿಮಲೆ, ಜಿಲ್ಲಾ ಆರ್.ಸಿ.ಸಿ. ಸಭಾಪತಿ ಯಶವಂತ ಪಟವರ್ಧನ್ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.