ಚೆನ್ನೈಯ ಆಟೋ ಚಾಲಕನೋರ್ವ ತೋರಿದ ಉದಾರತೆಗೆ ಆತನನ್ನು ಅಭಿನಂದಿಸಲಾಗಿದೆ.
ಕೆಲ ತಿಂಗಳ ಹಿಂದೆ ಕೆ. ರವಿಚಂದ್ರನ್ ಅವರ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಗೆ ಹೃದಯಾಘಾತ ಸಂಭವಿಸಿದ್ದು, ರವಿಚಂದ್ರನ್(48) ಪ್ರಯಾಣಿಕನ ಜೀವ ಉಳಿಸಲು ಆಸ್ಪತ್ರೆಗೆ ಧಾವಿಸಿದ್ದಾನೆ. ಆಸ್ಪತ್ರೆಯಲ್ಲಿ ವೈದ್ಯರು ನಿಯಂತ್ರಕನ ಶಿಫಾರಸು ಮಾಡಿದ್ದಾರೆ. ಇದಕ್ಕೆ ರವಿಚಂದ್ರನ್ ಒಪ್ಪಿಕೊಂಡಿದ್ದಾನೆ.
ಚಿಕಿತ್ಸೆಯ ಒಟ್ಟು ವೆಚ್ಚ ರೂ.1 ಲಕ್ಷ ಆಗಿದ್ದರೂ, ರಿಯಾಯಿತಿ ದರದಲ್ಲಿ ರೂ. 47,000 ಪಾವತಿಸುವಂತೆ ಹೇಳಲಾಗಿತ್ತು. ಕೋಲ್ಕತಾದಿಂದ ವಿಮಾನದ ಮೂಲಕ ಬಂದ ರಿಕ್ಷಾ ಪ್ರಯಾಣಿಕನ ಪುತ್ರನಲ್ಲಿ ನಿಧಿಯ ಕೊರತೆಯಿಂದಾಗಿ ಅಷ್ಟೊಂದು ವೆಚ್ಚ ಪಾವತಿಸಲು ಅಸಮರ್ಥನಾಗಿದ್ದ.
ತನ್ನ ವಿಮಾನ ಟಿಕೆಟ್ ಮತ್ತಿತರ ಖರ್ಚುಗಳನ್ನು ಕಳೆದು ಆತನಲ್ಲಿ ಉಳಿದಿದ್ದು ಕೇವಲ ರೂ. 15,000 ಮಾತ್ರ. ಆತನ ಅನಿವಾಯತೆಯನ್ನು ಅರಿತುಕೊಂಡ ರಿಕ್ಷಾ ಚಾಲಕ ರವಿಚಂದ್ರನ್ ತನ್ನ ಏಕೈಕ ಆಸ್ತಿಯಾಗಿರುವ ರಿಕ್ಷಾವನ್ನು ಮಾರಿ ಆಸ್ಪತ್ರೆಯ ಬಿಲ್ ಪಾವತಿಸಲು ಸಹಕರಿಸಿದ್ದಾನೆ.
ಚೆನ್ನೈಯ ಅಣ್ಣಾ ಆಟೋ ವೆಲ್ಫೇರ್ ಟ್ರಸ್ಟ್ ಆತನ ಮಾನವೀಯತೆಗೆ ಈ ವಾರ ಪ್ರಶಸ್ತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.