ಬೆಳ್ತಂಗಡಿ : ತಾಲೂಕಿನ 7 ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಗುರುವಾರ 13 ಮಂದಿ ನಾಮ ಪತ್ರಗಳು ಹಿಂಪಡೆಯಲಾಗಿದ್ದು 26 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
ಬಿಜೆಪಿಯ ಹಾಲಿ ಜಿ. ಪಂ. ಸದಸ್ಯೆ ತುಳಸಿ ಹಾರಬೆ ಅವರು ಬಂಡಾಯವಾಗಿ ಕುವೆಟ್ಟು ಕ್ಷೇತ್ರದಲ್ಲಿ ಸ್ಪರ್ಧಾಕಣದಲ್ಲಿ ಮುಂದುವರಿದಿದ್ದಾರೆ, ಅಳದಂಗಡಿಯಲ್ಲಿ ಕಾಂಗ್ರೆಸ್ ಮುಖಂಡ ಮಾಜಿ ತಾಪಂ ಸದಸ್ಯ ಈಶ್ವರ ಬೈರ ಪಕ್ಷೇತರರಾಗಿ ಕಣದಲ್ಲಿ ಮುಂದುವರಿದಿದ್ದು ಉಳಿದಂತೆ ಬಹುತೇಕ ಬಂಡಾಯಗಳನ್ನು ಶಮನಗೊಳಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.
ನಾರಾವಿ ಜಿ.ಪಂ ಕ್ಷೇತ್ರದಲ್ಲಿ ಅಂತಿಮವಾಗಿ ಮೂವರು ಕಣದಲ್ಲಿದ್ದು ಕಾಂಗ್ರೆಸ್ನಿಂದ ಮಾಜಿ ಜಿ. ಪಂ. ಉಪಾಧ್ಯಕ್ಷ ಧರಣೇಂದ್ರ ಕುಮಾರ್, ಬಿಜೆಪಿಯಿಂದ ತಾ. ಪಂ. ಸದಸ್ಯ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಜಯಂತ ಕೋಟ್ಯಾನ್ ನಡುವೆ ನೇರ ಸ್ಪರ್ಧೆ ನಡೆಯುತ್ತಿದೆ.ಅಳದಂಗಡಿ ಜಿ.ಪಂ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಕೆಡಿಪಿ ಸದಸ್ಯ ಶೇಖರ ಕುಕ್ಕೇಡಿ, ಬಿಜೆಪಿಯಿಂದ ಸದಾಶಿವ, ಜನತಾದಳದಿಂದ ವೆಂಕಪ್ಪ, ಪಕ್ಷೇತರರಾಗಿ ಈಶ್ವರ ಬೈರ, ಚೆನ್ನಕೇಶವ, ಶಿವಾನಂದ ಅಂತಿಮ ಕಣದಲ್ಲಿದ್ದಾರೆ.
ಲಾಯಿಲ ಕ್ಷೇತ್ರದಲ್ಲಿ ಬಿಜೆಪಿಯಿಂದ ಸೌಮ್ಯಲತಾ ಗೌಡ, ಕಾಂಗ್ರೆಸ್ನಿಂದ ಶೋಭಾ ಎನ್. ಗೌಡ, ಸಿಪಿಐಎಂ ನಿಂದ ರೋಹಿಣಿ, ಜನತಾದಳ (ಜಾ) ದಿಂದ ಸಿಂಧೂದೇವಿ, ಸಂಯುಕ್ತ ಜನತಾದಳದಿಂದ ರೂಪಲತಾ ಕಣದಲ್ಲಿದ್ದಾರೆ. ಉಜಿರೆ ಕ್ಷೇತ್ರದಲ್ಲಿ ನೇರ ಸ್ಪರ್ಧೆ ನಡೆಯುತ್ತಿದ್ದು ಕಾಂಗ್ರೆಸ್ನಿಂದ ನಮಿತಾ ಕೆ, ಬಿಜೆಪಿಯಿಂದ ಮಂಜುಳಾ ಉಮೇಶ್ ಅಭ್ಯರ್ಥಿಗಳಾಗಿದ್ದಾರೆ.
ಧರ್ಮಸ್ಥಳ ಕ್ಷೇತ್ರದಲ್ಲಿ ಬಿಜೆಪಿಯಿಂದ ಜಿ.ಪಂ ಮಾಜಿ ಅಧ್ಯಕ್ಷ ಕೊರಗಪ್ಪ ನಾಯ್ಕ್, ಕಾಂಗ್ರೆಸ್ನಿಂದ ಬಿ. ರಮೇಶ್, ಸಿಪಿಐಎಂನಿಂದ ವಿಠಲ ಮಲೆಕುಡಿಯ, ಪಕ್ಷೇತರರಾಗಿ ನಾರಾಯಣ ಮಲೆಕುಡಿಯ ಕಣದಲ್ಲಿದ್ದಾರೆ. ಕಣಿಯೂರು ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಮಾಜಿ ಜಿಪಂ ಸದಸ್ಯ ಕೆ. ಕೆ. ಶಾಹುಲ್ ಹಮೀದ್, ಬಿಜೆಪಿಯಿಂದ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಸಂಯುಕ್ತ ಜನತಾದಳದಿಂದ ವೆಂಕಟೇಶ್ ಬೆಂಡೆ ಕಣದಲ್ಲಿದ್ದಾರೆ. ಕುವೆಟ್ಟು ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಶರಲ್ ನೊರೋನ್ಹ, ಬಿಜೆಪಿಯಿಂದ ತಾ. ಪಂ. ಸದಸ್ಯೆ, ಮಾಜಿ ಅಧ್ಯಕ್ಷೆ ಮಮತಾ ಶೆಟ್ಟಿ, ಪಕ್ಷೇತರರಾಗಿ ಹಾಲಿ ಜಿ.ಪಂ ಸದಸ್ಯೆ ತುಳಸಿ ಹಾರಬೆ, ಸಂಯುಕ್ತ ಜನತಾದಳದಿಂದ ಲಕ್ಷ್ಮೀ. ಪಿ. ರಾವ್ ಕಣದಲ್ಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.