ಬೆಳ್ತಂಗಡಿ : ಪಂಚಭೂತ, ಪಂಚತತ್ವಗಳು ದೇವಸ್ಥಾನಗಳಿಂದ ಅರಿವಿಗೆ ಬರುತ್ತದೆ. ಪುರುಷಾರ್ಥಚತುಷ್ಟಯವನ್ನು ಸಾಧಿಸುವುದೇ ಜೀವನದ ಉದ್ದೇಶವಾಗಿರಬೇಕು ಎಂದು ಮೂಡಬಿದ್ರೆಯ ಸ್ವಸ್ತಿಶ್ರೀ ಭಟ್ಟಾರಕಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿನುಡಿದರು. ಅವರು ಪಡಂಗಡಿ ಗ್ರಾಮದ ಮಲ್ಲಿಪ್ಪಾಡಿಯಲ್ಲಿ ನವೀಕರಣಗೊಂಡ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಟಾಷ್ಠಬಂಧ ಬ್ರಹ್ಮಕಲಶಾಭಿಷೇಕೋತ್ಸವದ ಮೂರನೇ ದಿನವಾದ ಬುಧವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ವಿವೇಕವು ನಿತ್ಯಜೀವನದಲ್ಲಿ ನಮ್ಮ ನಡವಳಿಕೆಗಳು ಹೇಗೆ ಇರುಬೇಕು ತಿಳಿಸುತ್ತದೆ. ಮನಸ್ಸಿನ ಮಡಿಯೇ ಮುಖ್ಯ. ಮನಸ್ಸಿನ ಕಲ್ಮಶಗಳನ್ನು ತೊಡೆಯುವುದೇ ಸನಾನತ ಸಂಸ್ಕೃತಿಯ ವೈಶಿಷ್ಟ್ಯ. ಮನಸ್ಸನ್ನು ದೈವತ್ವಕ್ಕೇರಿಸುವಲ್ಲಿ ದೇವಸ್ಥಾನಗಳು ಮುಖ್ಯ ಪಾತ್ರ ನಿರ್ವಹಿಸುತ್ತವೆ ಎಂದರು.ಅಧ್ಯಕ್ಷತೆಯನ್ನು ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ವಹಿಸಿದ್ದರು. ವೇದಿಕೆಯಲ್ಲಿ ಅತಿಥಿಗಳಾಗಿ ಬಳೆಂಜ ಗ್ರಾ.ಪಂ. ಅಧ್ಯಕ್ಷೆ ದೇವಕಿ, ಗೇರುಕಟ್ಟೆ ಕಳಿಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ವಸಂತ ಮಜಲು, ಬಂಟರ ಸಂಘದ ಮಾಜಿ ಅಧ್ಯಕ್ಷ ಜಯರಾಮ ಶೆಟ್ಟಿ, ನಿವೃತ್ತ ಶಿಕ್ಷಕ ನೇಮಿರಾಜ ಹೆಗ್ಡೆ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಯೋಗಿಶ್ ಕುಮಾರ್ ನಡಕ್ಕರ, ದೇಗುಲ ಆಡಳಿತ ಮೊಕ್ತೇಸರ ಅಮರನಾಥ ಹೆಗ್ಡೆ ವೇದಿಕೆಯಲ್ಲಿದ್ದರು.ದೇಗುಲ ಅರ್ಚಕರತ್ನಾಕರ ನೂರಿತ್ತಾಯ ದಾನಿಗಳಾದ ರಾಜೀವ್ಎಲ್. ಶೆಟ್ಟಿ, ಅಮರನಾಥ ಹೆಗ್ಡೆ, ಚಂದ್ರಕಾಂತ ಜೈನ್, ಪುಷ್ಪರಾಜ ಜೈನ್, ಸತೀಶ್ ಜೈನ್, ಸುಕೇಶಿನಿ, ನೋಣಯ್ಯಗೌಡ, ಲಕ್ಷ್ಮೀಶ್ ಮನೋಳಿತ್ತಾಯ ಇವರನ್ನು ಸಮ್ಮಾನಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಗದೀಶ್ಗೌಡಸ್ವಾಗತಿಸಿ, ಪ್ರಸ್ತಾವಿಸಿದರು.ಸುಕೇಶಿನಿ ವಂದಿಸಿದರು. ಪೆರೋಡಿತ್ತಾಯ ಕಟ್ಟೆ ಸ.ಹಿ.ಪ್ರಾ.ಶಾಲೆಯ ಸಹಶಿಕ್ಷಕ ದೇವದಾಸ್ ನಾಯಕ್, ಬಳೆಂಜ ಸ.ಉ.ಪ್ರಾ.ಶಾಲೆಯ ಸಹಶಿಕ್ಷಕಿ ಮೋಹಿನಿ ಕಾರ್ಯಕ್ರಮ ನಿರ್ವಹಿಸಿದರು.
ನಾನು ಉತ್ತರ ಭಾರತದಲ್ಲಿನ ಶೈವ, ವೈಷ್ಣವ, ದುರ್ಗಾ ಇತ್ಯಾದಿ ಕ್ಷೇತ್ರಗಳನ್ನು ಸಂದರ್ಶಿಸಿ ಬಂದಿದ್ದೇನೆ. ಆದರೆ ದ.ಕ.ದಲ್ಲಿ ಸರ್ವಜಾತಿಯ ಭಾವೈಕ್ಷತೆ, ಪರಸ್ಪರ ಅವಿನಾಭವ ಸಂಬಂಧ ದೇಶದಲ್ಲಿ ಎಲ್ಲಿಯೂ ಇಲ್ಲ. ವೈದಿಕ, ಜೈನ, ಬೌದ್ಧ, ಸಂಸ್ಕೃತಿಗಳ ಮಧ್ಯೆ ಪರಸ್ಪರ ಸಂಬಂಧ ಇಲ್ಲಿ ಮಾತ್ರಕಾಣಲು ಸಾಧ್ಯ- ಮೂಡುಬಿದರೆ ಭಟ್ಟಾರಕ ಶ್ರೀ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.