ಮಂಗಳೂರು : ಪುತ್ತಿಗೆ ಜಿಲ್ಲಾ ಪಂಚಾಯತ್ ಅಭ್ಯರ್ಥಿ ಸುಚರಿತ ಶೆಟ್ಟಿ ಸಚಿವ ಅಭಯಚಂದ್ರ ಜೈನ್ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿಯವರಲ್ಲಿ ದೂರನ್ನು ದಾಖಲಿಸಿದ್ದಾರೆ.
ಪುತ್ತಿಗೆ ಜಿಲ್ಲಾ ಪಂಚಾಯತ್ ಅಭ್ಯರ್ಥಿ ಸುಚರಿತ ಶೆಟ್ಟಿಯವರು ಫೆ..9 ರಂದು ನಾಮಪತ್ರ ಪರಿಶೀಲನೆ ಸಂಧರ್ಭ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಸರಕಾರಕ್ಕೆ ತೆರಿಗೆ ಮತ್ತು ನೀರಿನ ಬಿಲ್ಲು ಪಾವತಿಸಿಲ್ಲ ಎಂದು ಆಕ್ಷೇಪಣೆ ಹಾಕಿ ಅವರ ನಾಮಪತ್ರವನ್ನು ಅಂಗೀಕಾರ ಮಾಡಬಾರದೆಂದು ಚುನಾವಣಾಧಿಕಾರಿಯಲ್ಲಿ ವಿನಂತಿಸಿದ್ದರು.
ಅದರ ವಿಚಾರಣೆಗೆಂದು ಮಧ್ಯಾಹ್ನ 3 ಗಂಟೆ ಬರಲು ತಿಳಿಸಿದ್ದು, ಆ ಸಂಬಂಧ ತಾನು ಪೂರಕದಾಖಲೆಗಳನ್ನು ಸಲ್ಲಿಸಿದ್ದೆ. ಆಗ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಸಚಿವ ಅಭಯಚಂದ್ರ ಜೈನ್ ತನ್ನ ಬೆಂಬಲಿಗರೊಂದಿಗೆ ಚುನಾವಣಾ ಕಚೇರಿಗೆ ಆಗಮಿಸಿ ನಾಮಪತ್ರವನ್ನು ಅಂಗೀಕರಿಸುವಂತೆ ಒತ್ತಡವನ್ನು ಹೇರಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿರುತ್ತದೆ. ಅಲ್ಲದೇ ನನಗೂ ಸಚಿವರು ಧಮ್ಕಿ ಹಾಗೂ ಬೆದರಿಕೆಯನ್ನು ನೀಡಿದ್ದಾರೆ ಎಂದು ತಮ್ಮ ದೂರಲ್ಲಿ ತಿಳಿಸಿದ್ದಾರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.