ಜಾಗತಿಕ ಮಟ್ಟದಲ್ಲಿ ಕಚ್ಛಾ ತೈಲ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಆದರೆ ನರೇಂದ್ರ ಮೋದಿ ಸರ್ಕಾರ ಮಾತ್ರ ತೈಲ ಬೆಲೆಯಲ್ಲಿ ಭಾರೀ ಇಳಿಕೆ ಮಾಡದೆ ಜಾಣ ನಡೆಯನ್ನು ತೋರಿಸಿದೆ. ರಷ್ಯಾ, ತೈವಾನ್, ಬ್ರೆಝಿಲ್ನಂತಹ ದೇಶಗಳು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದೆ. ಚೀನಾದ ಆರ್ಥಿಕ ಬೆಳವಣಿಗೆ 25 ವರ್ಷಗಳಷ್ಟು ಹಿಂದಕ್ಕೆ ಸಾಗಿದೆ. ಆದರೂ ತೈಲ ಬೆಲೆ ಇಳಿಕೆ ಭಾರತದ ಆರ್ಥಿಕತೆಗೆ ಸಹಾಯ ಮಾಡುತ್ತಿದೆ.
ತೈಲ ಬೆಲೆ ಇಳಿಕೆಯಿಂದಾಗಿ ಭಾರತ ಆರ್ಥಿಕತೆಗೆ ಅತ್ಯಗತ್ಯವಾಗಿ ಬೇಕಾಗಿರುವ ಹಣದುಬ್ಬರ, ಬಡ್ಡಿದರ ಮತ್ತು ಚಾಲ್ತಿ ಲೆಕ್ಕ ಕೊರತೆಯನ್ನು ಪುನಃಶ್ಚೇತನಗೊಳಿಸಿಕೊಂಡಿದೆ. ಸರಿಯಾಗಿ ಮೂರು ವರ್ಷಗಳ ಹಿಂದೆ ಈ ಮೂರು ಅಂಶಗಳು ಭಾರತದ ಆರ್ಥಿಕತೆಯ ಹಳಿ ತಪ್ಪುವಂತೆ ಮಾಡಿದ್ದವು.
ಕಚ್ಛಾ ತೈಲ ಬೆಲೆ ಡಾಲರ್ ಲೆಕ್ಕದಲ್ಲಿ ಈಗ 12 ವರ್ಷಗಳಷ್ಟು ಕಡಿಮೆಯಾಗಿದೆ, ಇದು ನಮ್ಮ ಆರ್ಥಿಕತೆ ಉತ್ತಮ ಸ್ಥಿತಿಗೆ ತಲುಪುವಂತೆ ಮಾಡಲು ಸಹಕಾರಿಯಾಗಿದೆ. ಕೆಲ ಟೀಕಾಕಾರರು ಹೇಳುವಂತೆ 2012-13 ನೇ ಸಾಲಿನಲ್ಲಿ ಕಚ್ಛಾ ತೈಲ ಬೆಲೆ ಬ್ಯಾರಲ್ಗೆ 150 ಡಾಲರ್ ಇದ್ದಾಗ ಪೆಟ್ರೋಲ್ ದರ ಲೀಟರ್ಗೆ 70 ರೂ. ಆಗಿತ್ತು. ಈಗ ಕಚ್ಛಾ ತೈಲ ಬೆಲೆ ಬ್ಯಾರಲ್ಗೆ 33 ಡಾಲರ್ ಇದೆ ಆದರೆ ಪೆಟ್ರೋಲ್ ಬೆಲೆ ರೂ. 60 ಯಾಕೆ ಹೀಗೆ?
ಯಾಕೆಂದರೆ ಈಗ ಭಾರತ ಸರ್ಕಾರ ಕಚ್ಛಾ ತೈಲ ಬೆಲೆಯ ಇಳಿಕೆಯ ಲಾಭದ ಸ್ವಲ್ಪ ಅಂಶವನ್ನು ಗ್ರಾಹಕರಿಗೆ ನೀಡಿ, ಉಳಿದುದನ್ನು ಚಾಲ್ತಿ ಲೆಕ್ಕ ಕೊರತೆ ನೀಗಿಸುವುದಕ್ಕೆ ಸದುಪಯೋಗ ಪಡಿಸುತ್ತಿದೆ. ಇದು ಭಾರತ ಆರ್ಥಿಕತೆ ಪುನಃಶ್ಚೇತನಗೊಳ್ಳುವುದಕ್ಕೂ ಕಾರಣವಾಗುತ್ತಿದೆ.
ಮೂಲಗಳ ಪ್ರಕಾರ 2015 ರಲ್ಲಿ ಕಚ್ಛಾ ತೈಲ ಬೆಲೆಯ ಕುಸಿತದಿಂದ ಭಾರತಕ್ಕೆ ಆದ ಲಾಭ 2 ಲಕ್ಷ ಕೋಟಿ, ಇದನ್ನು ಚಾಲ್ತಿ ಲೆಕ್ಕ ಕೊರತೆ ನೀಗಿಸಲು ಭಾರತ ವಿನಿಯೋಗಿಸಿದೆ. 2014 ರಿಂದ ಚಾಲ್ತಿ ಲೆಕ್ಕ ಕೊರತೆ ಶೇ. 4.5 ರಷ್ಟು ಕಡಿತವಾಗಿದೆ. ಹಣದುಬ್ಬರ ಕೂಡ ಸಿಂಗಲ್ ಡಿಜಿಟ್ ಅಂದರೆ ಶೇ.6ಕ್ಕೆ ಇಳಿಕೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.