ಮಂಗಳೂರು : ಎಬಿವಿಪಿ ಪದವಿ ಪರೀಕ್ಷೆಯ ಫಲಿತಾಂಶ ವಿಳಂಬವನ್ನು ಖಂಡಿಸಿ ಬೆಸೆಂಟ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಎಬಿವಿಪಿ ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ ತೇಜಸ್ವಿ ಪರೀಕ್ಷೆ ನಡೆದು ಎರಡು ತಿಂಗಳು ಕಳೆದರು ಇನ್ನೂ ಫಲಿತಾಂಶ ಪ್ರಕಟಿಸದೆ ವಿ.ವಿ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದ್ದಾರೆ.
ವಿವಿ ಈ ಕೂಡಲೇ ವಿದ್ಯಾರ್ಥಿಗಳ ಫಲಿತಾಂಶವನ್ನು ತಪ್ಪಿಲ್ಲದೆ ಸರಿಯಾಗಿ ಪ್ರಕಟಿಸಬೇಕೆಂದು ವಿಶ್ವವಿದ್ಯಾನಿಲಯಕ್ಕೆ ಆಗ್ರಹಿಸಿದ್ದಾರೆ. ಫಲಿತಾಂಶದ ಬಗ್ಗೆ ವಿದ್ಯಾರ್ಥಿಗಳಲ್ಲಿ ಎದ್ದಿರುವ ಗೊಂದಲವನ್ನು ಕೂಡ ಪರಿಹರಿಸದೆ ವಿದ್ಯಾರ್ಥಿಗಳನ್ನು ಕತ್ತಲಲ್ಲಿ ಇಟ್ಟಿರುವ ವಿವಿಯನ್ನು ತರಾಟೆಗೆ ತೆಗೆದುಕೊಂಡರು.
ನಗರ ಕಾರ್ಯದರ್ಶಿ ಹಿತೇಶ್ ತಾಲೂಕು ಸಂಚಾಲಕ ಸುದಿತ್ ರಾಜ್ಯ ಕಾರ್ಯಕಾರಿಣಿ ಸದಸ ಕು. ನೀಮಾ ಜಿಲ್ಲಾ ಸಂಚಾಲಕ ಚೇತನ್ ಪಡೀಲ್, ತಾಲೂಕು ಸಹ ಸಂಚಾಲಕ ಜಯೇಶ್, ವಿದ್ಯಾರ್ಥಿ ಮುಖಂಡರಾದ ಶೀತಲ್, ಅಭಿಲಾಷ್, ಶುಭಿತ್, ಕೀರ್ತನ್, ಆಕಾಶ್, ಮುನಿಷ್ ಮತ್ತಿತ್ತರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.