ಬೆಳ್ತಂಗಡಿ : ತಾಲೂಕಿನಲ್ಲಿ ಜಿಲ್ಲಾ ಪಂಚಾಯತು ಹಾಗೂ ತಾಲೂಕು ಪಂಚಾಯತು ಚುನಾವಣೆಯ ನಾಮಪತ್ರ ಸಲ್ಲಿಕೆಯ ಕಾರ್ಯ ಪೂರ್ಣಗೊಂಡಿದ್ದು ಜಿಲ್ಲಾ ಪಂಚಾಯತಿನ 7 ಸ್ಥಾನಗಳಿಗೆ 45 ನಾಮಪತ್ರಗಳು ಸಲ್ಲಿಕೆಯಾಗಿವೆ. ತಾಲೂಕು ಪಂಚಾಯತಿನ 26 ಸ್ಥಾನಗಳಿಗೆ 91 ನಾಮಪತ್ರಗಳು ಸಲ್ಲಿಕೆಯಾಗಿದ್ದು ಬಹುತೇಕ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ನಡೆಯುವುದು ನಿಶ್ಚಿತವಾಗಿದೆ.
ನಾರಾವಿ ಜಿ.ಪಂ ಕ್ಷೇತ್ರದಲ್ಲಿ 3 ನಾಮಪತ್ರಗಳು, ಅಳದಂಗಡಿ ಕ್ಷೇತ್ರದಲ್ಲಿ 14, ಲಾಯಿಲ ಕ್ಷೇತ್ರದಲ್ಲಿ 8, ಉಜಿರೆಯಲ್ಲಿ 3, ಧರ್ಮಸ್ಥಳ 4, ಕಣಿಯೂರು 6, ಕುವೆಟ್ಟು 5 ನಾಮಪತ್ರಗಳು ಸಲ್ಲಿಕೆಯಾಗಿದೆದೆ.
ತಾಲೂಕು ಪಂಚಾಯತಿನಲ್ಲಿ 26 ಸ್ಥಾನಗಳಿಗೆ 91 ನಾಮಪತ್ರಗಳು ಸಲ್ಲಿಕೆಯಾಗಿದೆ. ನಾರಾವಿ 2, ವೇಣೂರು 3, ಹೊಸಂಗಡಿ 3, ಅಳದಂಗಡಿ 3, ಅಂಡಿಂಜೆ 5, ಶಿರ್ಲಾಲು 2, ಪಡಂಗಡಿ 3, ಲಾಯಿಲ 4, ನಡ 2, ಮಿತ್ತಬಾಗಿಲು 3, ಉಜಿರೆ 4, ಮುಂಡಾಜೆ 3, ಚಾರ್ಮಾಡಿ 9, ನೆರಿಯ 4, ಧರ್ಮಸ್ಥಳ 4, ಕೊಕ್ಕಡ 4, ಕಳೆಂಜ 3, ಅರಸಿನಮಕ್ಕಿ 3, ಉರುವಾಲು 2, ಇಳಂತಿಲ 5, ತಣ್ಣೀರುಪಂತ 4, ಬಾರ್ಯ 2, ಮಾಲಾಡಿ 3, ಮಡಂತ್ಯಾರು 2, ಕುವೆಟ್ಟು 7, ಕಳಿಯ 2 ನಾಮಪತ್ರಗಳು ಸಲ್ಲಿಕೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.