ಬೆಳ್ತಂಗಡಿ : ಕಲ್ಮಂಜ ಗ್ರಾ. ಪಂ.ನ ಕಲ್ಮಂಜ ಗ್ರಾಮದ ಅಕ್ಷಯ ನಗರ ಮತದಾರರು ಹಲವಾರು ವರ್ಷಗಳಿಂದ ಬೇಡಿಕೆ ನೀಡಿದರೂ ರಸ್ತೆ ಡಾಮರೀಕರಣವಾಗದ ಕಾರಣ ಚುನಾವಣೆ ಬಹಿಷ್ಕರಿಸುವುದಾಗಿ ನಿರ್ಧರಿಸಿ ಈ ಬಗ್ಗೆ ಸೋಮವಾರ ತಾಲೂಕು ಚುನಾವಣಾ ಅಧಿಕಾರಿಗೆ ಮನವಿ ಸಲ್ಲಿಸಿದರು.
ನಿಡಿಗಲ್-ಅಕ್ಷಯನಗರ-ನೀರಚಿಲುಮೆ ರಸ್ತೆ ಡಾಮರೀಕರಣ, ನಿಡಿಗಲ್-ಪಜಿರಡ್ಕ ರಸ್ತೆ ಡಾಮರೀಕರಣಕ್ಕೆ ಕಳೆದ 20 ವರ್ಷಗಳಿಂದ ಮನವಿ ನೀಡುತ್ತಾ ಬಂದಿದ್ದರೂ ಬೇಡಿಕೆಗೆ ಈ ವರೆಗೂ ಸ್ಪಂದನೆ ಸಿಕ್ಕಿಲ್ಲ. ಚುನಾವಣಾ ಸಂದರ್ಭ ಮಾತ್ರ ಮತದಾರರ ಓಟಿಗಾಗಿ ಭರವಸೆ ನೀಡುತ್ತಾರೆ. ಚುನಾವಣೆ ಆದ ಬಳಿಕ ಆದರೆ ಮೂಲಭೂತ ಸೌಕರ್ಯಕ್ಕಾಗಿ ಮನವಿ ನೀಡಿದರೂ ಯಾರು ಸ್ಪಂದಿಸುವುದಿಲ್ಲ.
ಈ ಭಾಗದ ಸುಮಾರು 550 ಕ್ಕೂ ಅಧಿಕ ಮತದಾರರ ಸಹಿಗಳಿರುವ ಮನವಿಯನ್ನು ಈ ಭಾಗದ ಜನರು ಚುನಾವಣಾ ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿ ರಾಜು ಮೊಗವೀರ ಅವರಿಗೆ ಮನವಿ ನೀಡಿದರು. ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ವಿನಂತಿಸಿದರು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಿ ಎಂದು ಒತ್ತಾಯಿಸಿದರು.
ಎಡ್ವರ್ಡ್ ಡಿಸೋಜಾ, ಪ್ರಕಾಶ್ ಪೂಜಾರಿ, ಪ್ರಕಾಶ್ ಡಿ., ಶೀನ ಕಲ್ಮಂಜ, ಉಮೇಶ್ ಪಿ., ರಮೇಶ್ ಗೌಡ, ಶ್ರೀಧರ ಶೆಟ್ಟಿ ಮೊದಲಾದವರು ಜೊತೆಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.