ಮಂಗಳೂರು : ಬಿಜೆಪಿಯ ಜಿಲ್ಲಾ ಕಾರ್ಯಾಲಯದಲ್ಲಿ ಡಾ|ಬಿ.ಆರ್.ಅಂಬೇಡ್ಕರ್ರವರ 124ನೇ ಜನ್ಮ ದಿನಾಚರಣೆಯನ್ನು ಮಂಗಳವಾರ ಆಚರಿಸಿದರು. ಮುಖ್ಯ ಅತಿಥಿಯಾಗಿ ಮಾಜಿ ಶಾಸಕ ಕೆ.ಜಯರಾಮ್ ಶೆಟ್ಟಿಯವರು ಅಂಬೇಡ್ಕರ್ರವರು ಜೀವನದಲ್ಲಿ ಅಸ್ಪೃಶ್ಯತೆಯಿಂದ ಅನುಭವಿಸಿದ ನೋವುಗಳನ್ನು ಸಹಿಸಿಕೊಂಡು ಅದರ ವಿರುದ್ಧ ಹೋರಾಡಿ ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿ, ಚಿಂತಕರಾಗಿ ಮೂಡಿಬಂದಿದ್ದಾರೆ ಎಂದರು.
ಅವರು ಅಸ್ಪೃಶ್ಯತೆಯ ವಿರುದ್ಧ ಹೋರಾಡಿರುವುದು ಹಿಂಸಾತ್ಮಕ ಮಾರ್ಗದಿಂದಲ್ಲ. ಆದರೆ ಅವರನ್ನು ಇವತ್ತು ಸಮಾಜದಲ್ಲಿ ಅನೇಕ ಸಂಘಟನೆಗಳು ಪ್ರತ್ಯೇಕ ಒಂದು ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳುತ್ತಿರುವುದು ನೋವಿನ ವಿಚಾರವಾಗಿದೆ. ಅವರೊಬ್ಬರು ರಾಷ್ಟ್ರದ ಮಹಾನ್ ಪುರುಷರು ಎಷ್ಟೇ ಕಷ್ಟ ಬಂದರೂ ಅವರು ಭಾರತೀಯ ಸಂಸ್ಕೃತಿ ಮತ್ತು ರಾಷ್ಟ್ರೀಯತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ ಆದರ್ಶರಾಗಿ ಬಾಳಿದವರು. ಆದರೆ ಇವತ್ತಿನ ವಿಚಾರವಾದಿಗಳು ಅವರ ಬಗ್ಗೆ ತಪ್ಪು ಕಲ್ಪನೆಗಳನ್ನು ನೀಡುತ್ತಿರುವುದು ವಿಷಾದನೀಯ ಎಂದು ಹೇಳಿದರು
ಶೋಷಿತ ವರ್ಗದಲ್ಲಿ ಜನಿಸಿದ ಸಂವಿಧಾನ ಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರ್ರವರು ಸಮಾಜದಲ್ಲಿ ಸಂಘರ್ಷವನ್ನು ನಡೆಸದೆ ತಮಗಾಗಿರುವ ಅವಮಾನ, ಅಪಮಾನಗಳನ್ನು ಮತ್ತು ಅಂದಿನ ಕಾಲದಲ್ಲಿ ಆಚರಣೆಯಲ್ಲಿದ್ದ ಅಸ್ಪೃಶ್ಯತೆಯ ವಿರುದ್ಧ ಹೋರಾಡಿ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವದ ದೇಶಕ್ಕೆ ಸಂವಿಧಾನವನ್ನು ನೀಡುವುದರ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ತನ್ನನ್ನು ತೊಡಗಿಸಿಕೊಂಡಿರುವುದು, ಇಂದಿನ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಕಾರ್ಯಕರ್ತರಿಗೆ ಮಾರ್ಗದರ್ಶಕರಾಗಿದ್ದಾರೆ, ನಾವು ಅವರ ವಿಚಾರವನ್ನು ಕಾಯ ವಾಚ, ಮನಸಾ ಅನುಷ್ಠಾನಗೊಳಿಸುವುದರ ಮೂಲಕ ಅವರಿಗೆ ಸಲ್ಲಿಸುವ ಗೌರವವಾಗಿದೆಯೆಂದು ಜಿಲ್ಲಾಧ್ಯಕ್ಷ ಪ್ರತಾಪ್ಸಿಂಹ ನಾಯಕ್ರವರು ಅಧ್ಯಕ್ಷರ ಭಾಷಣದಲ್ಲಿ ಹೇಳಿದರು.
ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು, ಮಂಗಳೂರು ನಗರ ದಕ್ಷಿಣ ಮಂಡಲದ ಅಧ್ಯಕ್ಷರಾದ ರವಿಶಂಕರ್ ಮಿಜಾರ್ ಉಪಸ್ಥಿತರಿದ್ದರು. ಜಿಲ್ಲಾ ಬಿಜೆಪಿ ಪರಿಶಿಷ್ಟ ಜಾತಿಯ ಪ್ರಧಾನ ಕಾರ್ಯದರ್ಶಿ ವಿನಯನೇತ್ರ ಡಿ. ಕಾರ್ಯಕ್ರಮ ನಿರೂಪಿಸಿದರು ಮತ್ತು ಜಿಲ್ಲಾ ಕಾರ್ಯದರ್ಶಿ ಕಸ್ತೂರು ಪಂಜ ಧನ್ಯವಾದಗೈದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.