ಬೆಳ್ತಂಗಡಿ : ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಯು.ಜಿ.ಸಿ ಮತ್ತು ಶ್ರೀ.ಕ್ಷೇ.ಧ.ಗ್ರಾ.ಯೋ. ಇದರ ಪ್ರಾಯೋಜಿಕತ್ವದಲ್ಲಿ ಇಂದು (ಫೆ.5) ರಾಷ್ಟ್ರೀಯ ಮಟ್ಟದ ವಿಚಾರಸಂಕೀರ್ಣ ನಡೆಯಲಿದೆ. ‘ಕರ್ನಾಟಕದಲ್ಲಿ ಮಹಿಳಾ ರಾಜಕೀಯ ನಾಯಕತ್ವ’ ಎಂಬ ವಿಷಯದ ಕುರಿತು ನಡೆಯಲಿರುವ ವಿಚಾರ ಸಂಕೀರ್ಣದಲ್ಲಿ ಎಸ್.ಡಿ.ಎಂ ಶಿಕ್ಷಣಸಂಸ್ಥೆಗಳ ಉಪಾಧ್ಯಕ್ಷ ಡಾ| ಎಸ್. ಪ್ರಭಾಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ನೆರವೇರಿಸಲಿದ್ದು, ರಾಜ್ಯ ಮಹಿಳಾ ಅಯೋಗದ ಮುಖಸ್ಥೆ ಮಂಜುಳಾ ಮಾನಸ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ನಂತರ ನಡೆಯಲಿರುವ ವಿಚಾರಗೋಷ್ಠಿಯಲ್ಲಿ ಹಿರಿಯಪತ್ರಕರ್ತೆ ಡಾ| ಆರ್. ಪೂರ್ಣಿಮಾ, ಮಂಗಳೂರು ವಿಶ್ವವಿದ್ಯಾಲಯದ ಆಂಗ್ಲ ಉಪನ್ಯಾಸಕಿ ಪ್ರೊ. ಪರಿಣಿತ, ಶ್ರೀ.ಧ.ಮ. ಸಿರಿ ಗ್ರಾಮೋದ್ಯೋಗ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಮನೋರಮಾ ಭಟ್ ಹಾಗೂ ಮಂಗಳೂರು ವಿ.ವಿ. ಯ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಪಿ. ಎಲ್. ಧರ್ಮ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭದ ಅದ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ.ಎಸ್. ಮೊಹನನಾರಾಯಣ ವಹಿಸಲಿದ್ದು, ಮಂಗಳೂರು ವಿ.ವಿ. ಯ ರಾಜ್ಯಶಾಸ್ತ್ರ ಉಪನ್ಯಾಸಕ ಪ್ರೊ. ರಾಜರಾಮ್ ತೋಳ್ಪಾಡಿ, ತಿರುಪತಿ ಎಸ್.ವಿ. ವಿಶ್ವವಿದ್ಯಾಲಯದ ಪ್ರೊ. ಎಮ್.ಸಿ. ರೆಡ್ಡೆಪ್ಪ ರೆಡ್ಡಿ ಮತ್ತಿತರರು ಉಪಸ್ಥಿತರಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.