ಮೆಹ್ಸಾನಾ: ಖೀಮ್ಜೀಭಾಯಿ ಪ್ರಜಾಪತಿ ತನ್ನ ಊರುಗೋಲಿನ ಸಹಾಯದಿಂದ ಇಲ್ಲಿನ ಮಾಗ್ಪರಾ ಶಾಲೆಯ ಅಂಗನವಾಡಿಗೆ ಆಗಮಿಸುತ್ತಿದ್ದಂತೆ ಅಲ್ಲಿದ್ದ ಅಧ್ಯಾಪಕರು, ವಿದ್ಯಾರ್ಥಿಗಳಲ್ಲಿ ಒಂದು ವಿಶೇಷ ನಿರೀಕ್ಷೆ ಮೂಡಿತ್ತು.
ಅಂಗನವಾಡಿಯ 10 ವಿದ್ಯಾರ್ಥಿಗಳ ಪಾಲಕರನ್ನು ಕರೆಯಲಾಗಿದ್ದು, ಪ್ರಜಾಪತಿಯ ಕಳೆದ ಮೂರು ವರ್ಷಗಳ ಪದ್ಧತಿಯಂತೆ ಆತ ಈ ಬಾರಿಯೂ ಈ ವಿದ್ಯಾರ್ಥಿಗಳಿಗೆ ಪುಸ್ತಕಗಳು ಅಥವಾ ಶಾಲಾ ಸಮವಸ್ತ್ರ ದಾನ ನೀಡುವ ನಿರೀಕ್ಷೆ ಹೊಂದಿದ್ದರು.
ಆದರೆ ಈ 68 ವರ್ಷದ ಭಿಕ್ಷುಕ ಬಾಲಕಿಯರ ಶಿಕ್ಷಣವನ್ನು ಪ್ರೋತ್ಸಾಹಿಸುವ ಸಲುವಾಗಿ ಚಿನ್ನದ ಕಿವಿಯೋಲೆಗಳನ್ನು ಹೊಂದಿದದ್ 10 ಪೆಟ್ಟಿಗೆಗಳನ್ನು ನೀಡಿದ್ದು, ಅಲ್ಲಿದ್ದವರನ್ನು ಬೆರಗುಗೊಳಿಸಿದೆ.
ಮೆಹ್ಸಾನಾದ ದೇವಾಲಯಗಳ ಹೊರಗೆ ಭಕ್ಷಾಟನೆಯಿಂದ ಪಡೆದ ಹಣದಿಂದ ಪ್ರಜಾಪತಿ ಈ ಕಿವಿಯೋಲೆಗಳನ್ನು ಖರೀದಿಸಿ ವಿದ್ಯಾರ್ಥಿಗಳಿಗೆ ಗಿಫ್ಟ್ ನೀಡಿದ್ದಾನೆ.
ಮಾಸಿಕ ವೆಚ್ಚ ಪೂರೈಸಲು ಹೋರಾಟ ನಡೆಸುತ್ತಿರುವ ನಾವು ಚಿನ್ನವನ್ನು ಪಡೆಯುವ ಕನಸು ಎಂದಿಗೂ ಕಂಡಿರಲಿಲ್ಲ ಎಂದು ಭೂಮಿ ಎಂಬ 3 ವರ್ಷದ ಬಾಲಕಿಯ ತಾಯಿ ಕುಮುದ್ ಲುಹಾರಿಯಾ ಹೇಳುತ್ತಾರೆ.
ಪ್ರಜಾಪತಿ ಬಾಲಕಿಯರಿಗೆ ಚಿನ್ನದ ಕಿವಿಯೋಲೆ ನೀಡುವ ತನ್ನ ಅಭಿಲಾಷೆ ವ್ಯಕ್ತಪಡಿಸಿದ್ದು, ಅಂಗನವಾಡಿ ಅತ್ಯಂತ ಬಡ ಕುಟುಂಬದ ಈ 10 ಬಾಲಕಿಯರನ್ನು ಆಯ್ಕೆ ಮಾಡಿದೆ. ಈ ಬಾಲಕಿಯರು ಸ್ಲಂಗಳಲ್ಲಿ ವಾಸಿಸುವ ದಿನಗೂಲಿ ಕಾರ್ಮಿಕರು ಮತ್ತು ಕಮ್ಮಾರರ ಕುಟುಂಬದವರಾಗಿದ್ದಾರೆ.
ವಿದ್ಯಾರ್ಥಿನಿಯರನ್ನು ಶಿಕ್ಷಣಕ್ಕಾಗಿ ಪ್ರೋತ್ಸಾಹಿಸುವ ಅಗತ್ಯವಿದೆ. ಅವರು ತಮ್ಮ ಕಾಲ ಮೇಲೆ ನಿಲ್ಲುವ ಸ್ವಾವಲಂಬಿಗಳಾಗಬೇಕು. ಮೆಹ್ಸಾನಾ ಗ್ರಾಮದ ಪರಿಸ್ಥಿತಿ ಶೋಚನೀಯವಾಗಿದೆ. ಗಂಡು ಮಕ್ಕಳನ್ನು ಹೋಲಿಸಿದರೆ ಹೆಣ್ಣು ಮಕ್ಕಳ ಸಂಖ್ಯೆ ಬಹಳ ಕಡಿಮೆ. ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಲು ಇದು ಪ್ರಮುಖ ಕಾರಣವಾಗಿದೆ ಎಂದು ಪ್ರಜಾಪತಿ ಹೇಳುತ್ತಾರೆ.
ಕಳೆದ 13 ವರ್ಷಗಳಲ್ಲಿ ಖೀಮ್ಜೀಭಾಯಿ ಪ್ರಜಾಪತಿ ಬಡ ವಿದ್ಯಾರ್ಥಿಗಳಿಗೆ ಪುಸ್ತಕಗಳು, ಶಾಲಾ ಸಮವಸ್ತ್ರ, ಶಾಲೆಯ ಖರ್ಚು ಮತ್ತಿತರ ಕಾರ್ಯಗಳಿಗೆ ಸುಮಾರು 80,000 ರೂಪಾಯಿ ವ್ಯಯಿಸಿದ್ದಾರೆ. ಅವರು ವಿಕಲಾಂಗರ ದಿಶಾ ಡೇ ಸ್ಕೂಲ್ ಸೇರಿದಂತೆ 12 ಪ್ರಾಥಮಿಕ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ ದಾನ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.