ನವದೆಹಲಿ: ಸಲಿಂಗಕಾಮವನ್ನು ಭಾರತದಲ್ಲಿ ಕಾನೂನಾತ್ಮಕಗೊಳಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವ ಸಲುವಾಗಿ ಈ ಬಗೆಗಿನ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮಂಗಳವಾರ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.
ಕಾಯ್ದೆ 377ರ ಅನ್ವಯ ಸಲಿಂಗ ಕಾಮವನ್ನು ಅಪರಾಧಗೊಳಿಸುವ ತನ್ನ ಹಿಂದಿನ ತೀರ್ಪನ್ನು ಮರುಪರಿಶೀಲನೆ ನಡೆಸುವಂತೆ ಕೋರಿ ಸುಪ್ರೀಂಗೆ ಎನ್ಜಿಓ ನಾಝ್ ಫೌಂಡೇಶನ್ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್, ನ್ಯಾ.ಅನಿಲ್ ಆರ್ ದೇವ್, ನ್ಯಾ.ಜಗದೀಶ್ ಸಿಂಗ್ ಖೆಹರ್ ಸೇರಿದಂತೆ ಐವರನ್ನು ಒಳಗೊಂಡ ಸಾಂವಿಧಾನಿಕ ಪೀಠಕ್ಕೆ ಸುಪ್ರೀಂ ವಗಾವಣೆಗೊಳಿಸಿದೆ.
ಸುಪ್ರಿಂನ ಈ ತೀರ್ಪು ಲೆಝ್ಬಿಯನ್, ಗೇ, ಬೈಸೆಕ್ಸುಲ್ ಮತ್ತು ಟ್ರಾನ್ಸ್ಜೆಂಡರ್ ಸಮುದಾಯಗಳಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಈ ಬಾರಿ ನಮಗೆ ನಮ್ಮ ವಾದ ಮತ್ತು ಸತ್ಯವನ್ನು ಮತ್ತಷ್ಟು ಬಲಿಷ್ಠವಾಗಿ ಸಲ್ಲಿಸಲು ಅವಕಾಶ ಲಭಿಸಿದೆ ಎಂದು ಹೋರಾಟಗಾರ ರಿತುಪರ್ಣ ಬೋರಹ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.