ಇತ್ತೀಚೆಗೆ ಕಂಪ್ಯೂಟರ್ ಬಳಸುತ್ತಿರುವವರು ವಿಂಡೋಸ್ 95 ಅಥವಾ 98ನಿಂದ ವಿಂಡೋಸ್ 7, 8 ಇಲ್ಲವೇ ವಿಂಡೋಸ್ 10ಗೆ ಅಪ್ಗ್ರೇಡ್ ಆಗುತ್ತಿದ್ದಾರೆ. ಇತ್ತೀಚೆಗೆ ವಿಂಡೋಸ್ 95 ಬಳಸುವವರೇ ಇಲ್ಲದಂತಾಗಿದೆ.
ಆದರೆ ನೀವು ಎಂದಾದರೂ ವಿಂಡೋಸ್ 95 ಬಳಸಲು ಬಯಸಿದಲ್ಲಿ ಅದು ಈಗ ಸಾಧ್ಯವಾಗಲಿದೆ. ಎರಡು ದಶಕಗಳಷ್ಟು ಹಿಂದಿನ ಮೈಕ್ರೋಸಾಫ್ಟ್ ವಿಂಡೋಸ್ 95 ಆಪರೇಟಿಂಗ್ ಸಿಸ್ಟಮ್ನ್ನು ವೆಬ್ ಬ್ರೌಸರ್ ಮೂಲಕ ಬಳಸಬಹುದಾಗಿದೆ. ಪ್ರೋಗ್ರಾಮರ್ ಆಂಡ್ರಿಯಾ ಫಾಲ್ಡ್ಸ್ ಅವರು ವಿಂಡೋಸ್ 95 ಅನುಕರಿಸುವ ಹೊಸ ವಿನ್ಯಾಸದ ವೆಬ್ಸೈಟ್ ಸೃಷ್ಟಿಸಿದ್ದಾರೆ.
ಫಾಲ್ಡ್ಸ್ ಅವರು ಜನಪ್ರಿಯ DOSBox ಎಮ್ಯೂಲೇಟರ್ ಬಳಸಿ ವಿಂಡೋಸ್ನ ಹಳೆಯ ಆವೃತ್ತಿ ಬಳಸಲು DOSBox ಕೋಡ್ನ್ನು ಜಾವಾ ಸ್ಕ್ರಿಪ್ಟ್ ಜೊತೆ ಸಂಕಲನ(Compiled) ಮಾಡಿ ವೆಬ್ ಬ್ರೌಸರ್ಗೆ ಬೆಂಬಲಿಸುವಂತೆ ವರ್ಗಾಯಿಸಿದ್ದಾರೆ. ಬಳಕೆದಾರರು ಬಯಸಿದಷ್ಟು ಸರಾಗವಾಗಿ ಈ ವೆಬ್ ಬ್ರೌಸರ್ ಕಾರ್ಯ ನಿರ್ವಹಿಸುವುದು ಕಷ್ಟಕರವಾಗಿದೆ. ಅಲ್ಲದೇ ಇದರಲ್ಲಿ ಇಂಟರ್ನೆಟ್ ಎಕ್ಸ್ಪ್ಲೋರರ್ internet explorer) 3.0 ಬಳಸಿದಲ್ಲಿ ಕ್ರ್ಯಾಶ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಫಾಲ್ಡ್ಸ್ ಅವರು ಮೈಕ್ರೋಸಾಫ್ಟ್ ಒಡೆತನದ ಹಕ್ಕು ಸ್ವಾಮ್ಯವನ್ನು ಉಲ್ಲಂಘಿಸುವಂತಿದ್ದು, ಯಾವುದೇ ಸಂದರ್ಭದಲ್ಲೂ ಮೈಕ್ರೋಸಾಫ್ಟ್ ಈ ವೆಬ್ ಬ್ರೌಸರ್ ತೆಗೆದು ಹಾಕುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಬಳಕೆದಾರ ಆರಂಭದಲ್ಲಿ ತನ್ನ ಕಂಪ್ಯೂಟರ್ನಲ್ಲಿ ವರ್ಚುವಲ್ ಮೆಶಿನ್ ಸ್ಥಾಪಿಸಿ, ಹಳೆಯ ಆಪರೇಟಿಂಗ್ ಸಿಸ್ಟಮ್ನ್ನು ಕಾಪಿ ಮಾಡಿದ ಅನಂತರ ಈ ಸೂಟ್ ಚಲಾಯಿಸಲು ಕೆಲವು ಪ್ರಕ್ರಿಯೆ ನಡೆಸುವ ಅಗತ್ಯವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.