ಮಹಾರಾಷ್ಟ್ರದವರಾದ ದಾದರಾವ್ ಬಿಲ್ಹೋರೆ ಮಗನನ್ನು ಕಳೆದುಕೊಂಡ ದುರಾದೃಷ್ಟವಂತ ತಂದೆ. ಜೀವನ ನಿರ್ವಹಣೆಗಾಗಿ ತರಕಾರಿಗಳನ್ನು ಮಾರುತ್ತಿರುವ ಅವರು, ಕಳೆದ ವರ್ಷದಿಂದ ರಸ್ತೆಯ ಹೊಂಡಗಳನ್ನು ಮುಚ್ಚುವ ಕಾಯಕದಲ್ಲೇ ಹೆಚ್ಚಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಇವರು ರಸ್ತೆಯ ಗುಂಡಿಗಳನ್ನು ಮುಚ್ಚಲೂ ಒಂದು ಕಾರಣವಿದೆ. ಅದುವೇ ಅವರ ಮಗನ ದುರಂತ ಸಾವು. 2015ರ ಜುಲೈ 28ರಂದು ಕಾಲೇಜು ಎಡ್ಮಿಷನ್ ಪ್ರಕ್ರಿಯೆ ಮುಗಿಸಿ ಸಹೋದರ ಸಂಬಂಧಿಯೊಂದಿಗೆ ಬೈಕ್ನಲ್ಲಿ ಬರುತ್ತಿದ್ದ ಇವರ 16 ವರ್ಷದ ಮಗ ಪ್ರಕಾಶ್ ರಸ್ತೆ ಗುಂಡಿಯಿಂದಾಗಿ ಅಪಘಾತಕ್ಕೊಳಗಾಗಿ ಸಾವನ್ನಪ್ಪಿದ್ದರು.
ಮಗನ ಸಾವಿನಿಂದ ಆಘಾತಕ್ಕೊಳಗಾದ ದಾದರಾವ್ ತನ್ನ ಮಗನಂತೆ ಯಾರೊಬ್ಬರೂ ದುರಂತ ಅಂತ್ಯ ಕಾರಣಬಾರದು ಎಂಬ ಕಾರಣಕ್ಕೆ ಮಹಾರಾಷ್ಟ್ರದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡುತ್ತಾ ಬರುತ್ತಿದ್ದಾರೆ.
ನನ್ನ ಮಗ ಸದ್ಗುಣ, ಬುದ್ಧಿವಂತ, ಆತ ತನಗಾದ ರೀತಿ ಬೇರೆಯವರಿಗೆ ಆಗದಿರಲಿ ಎಂದು ಸದಾ ಬಯಸುವವನು. ಯಾರ ನಿರ್ಲಕ್ಷ್ಯದಿಂದ ನನ್ನ ಮಗನ ಸಾವು ಸಂಭವಿಸಿತೋ ಅವರ ವಿರುದ್ಧ ಹೋರಾಟ ಮುಂದುವರೆಸುತ್ತೇನೆ. ಆದರೆ ನನ್ನಂತೆ ಯಾರೂ ಬಳಲಬಾರದು, ರಸ್ತೆ ಸುರಕ್ಷಿತವಾಗಿರಬೇಕು. ಅದಕ್ಕಾಗಿ ನಾನು ಶ್ರಮಿಸುತ್ತೇನೆ ಎನ್ನುತ್ತಾರೆ ದಾದಾರಾವ್.
ಕಟ್ಟಡ ನಿರ್ಮಾಣದ ಬಳಿ ಸಿಗುವ ಕಲ್ಲು, ಹೊಯಿಗೆ, ಮಣ್ಣು ಮುಂತಾದವುಗಳನ್ನು ತಂದು ಅವರು ಇಲ್ಲಿಯವರೆಗೆ ಹಲವಾರು ಗುಂಡಿಗಳನ್ನು ಮುಚ್ಚಿದ್ದಾರೆ. ಅಕ್ಕಪಕ್ಕದಲ್ಲಿ ಹಾದು ಹೋಗುವವರು ಅವರಿಗೆ ಸಹಾಯ ಮಾಡುತ್ತಾರೆ.
ಮಗನನ್ನು ಕಳೆದುಕೊಂಡ ದುಃಖದ ನಡುವೆಯೂ ಪರೋಪಕಾರ ನಡೆಸುತ್ತಿರುವ ದಾದಾರಾವ್ ನಿಜಕ್ಕೂ ಗ್ರೇಟ್ ಅಲ್ಲವೇ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.