ಬೆಳ್ತಂಗಡಿ : ಜಿ.ಪಂ. ಮತ್ತು ತಾ.ಪಂ. ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಅಭ್ಯರ್ಥಿತನದ ಆಕಾಂಕ್ಷಿಗಳ ಮಹತ್ವಾಕಾಂಕ್ಷೆ ಹೆಚ್ಚಾಗತೊಡಗಿದೆ. ಇದರ ಪರಿಣಾಮ ಪಕ್ಷದ ಉನ್ನತ ನಾಯಕರಿಗೆ ಯಾರನ್ನು ಆರಿಸುವುದು, ಯಾರನ್ನು ಬಿಡುವುದು ಎಂಬ ಸಮಸ್ಯೆ ತಲೆದೊರುತ್ತಿದೆ.
ಇಂತಹ ಸಮಸ್ಯೆ ಸೋಮವಾರ ಇಲ್ಲಿನ ಶಾಸಕ ಕೆ. ವಸಂತ ಬಂಗೇರ ಅವರ ಮುಂದೆ ಬಂದಿದೆ. ಬೆಳಿಗ್ಗೆ ಶಾಸಕರ ಮನೆಯ ಮುಂದೆ ಜನವೋ ಜನ. ಕಾರು, ಜೀಪು, ಬಸ್ಸುಗಳಲ್ಲಿ ಬಂದ ಜನ ಶಾಸಕರಿಗೆ ತಾವು ಬಯಸಿದ ಅಭ್ಯರ್ಥಿಗೆ ಟಿಕೆಟ್ ಕೊಡಲೇಬೇಕು ಎಂದು ಒತ್ತಡ ತರುತ್ತಿರುವುದು ಕಂಡು ಬಂತು. ಕಾಂಗ್ರೇಸ್ ಪಕ್ಷದ ವತಿಯಿಂದ ಜಿ.ಪಂ. ಚುನಾವಣೆಗೆ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿದ್ದು , ಕಣಿಯೂರು ಕ್ಷೇತ್ರ ಮಾತ್ರ ಬಾಕಿ ಉಳಿದಿದೆ.
ಇದು ಸಾಮಾನ್ಯ ಕ್ಷೇತ್ರ. ಈ ಕ್ಷೇತ್ರಕ್ಕೆ ಜಿ.ಪಂ. ಮಾಜಿ ಸದಸ್ಯರಾದ ರಾಜಶೇಖರ ಅಜ್ರಿ, ಶಾಹುಲ್ ಹಮೀದ್ ಹಾಗು ಧರ್ಮಸ್ಥಳ ಗ್ರಾ.ಪಂ.ನ ಮಾಜಿ ಅಧ್ಯಕ್ಷ ಚಂದನ್ ಕಾಮತ್ ತೀವ್ರ ಆಕಾಂಕ್ಷಿಗಳಾಗಿದ್ದಾರೆ. ಇವರೆಲ್ಲರೂ ತಮ್ಮ ತಮ್ಮ ಬೆಂಬಲಿಗರೊಂದಿಗೆ ಶಾಸಕರ ಮನೆ ಮುಂದೆ ಬೀಡುಬಿಟ್ಟು ಒತ್ತಡ ತರುತ್ತಿದ್ದಾರೆ. ಶಾಸಕರ ಒಲವು ಯಾರ ಕಡೆ ಇದೆ ಎಂದು ಇನ್ನೆರಡು ದಿನಗಳಲ್ಲಿ ಗೊತ್ತಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.