ಮುಂಬಯಿ: ಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಭೂಗತ ಪಾತಕಿಗಳಾದ ದಾವೂದ್ ಇಬ್ರಾಹಿಂ ಹಾಗೂ ಛೋಟಾ ರಾಜನ್ ಆಧರಿಸಿ ತನ್ನ ಮುಂದಿನ ಸಿನೇಮಾ ನಿರ್ಮಿಸಲು ಮುಂದಾಗಿದ್ದಾರೆ.
ದಾವೂದ್ ಹಾಗೂ ಛೋಟಾ ರಾಜನ್ ನಡುವಿನ ಒಡಕು, ದ್ವೇಷ ಹಾಗೂ ಅಬು ಸಲೇಮ್ನ ಹಠಾತ್ ಬೆಳವಣಿಗೆ ಕುರಿತ ’ಗವರ್ನ್ಮೆಂಟ್’ ಚಿತ್ರ ನಿರ್ಮಿಸಲಿದ್ದಾರೆ. ಈ ಹೊಸ ಸಿನೇಮಾ ಅಂಡರ್ವರ್ಲ್ಡ್ ಮತ್ತು ಬಾಲಿವುಡ್ ನಡುವಿನ ನಂಟಿನ ಹಿಂದಿರುವ ನೈಜ ಸತ್ಯವನ್ನು ಗಮನದಲ್ಲಿರಿಸಿ ನಿರ್ಮಿಸಲಾಗುವುದು ಎಂದು ವರ್ಷಾ ಹೇಳಿದ್ದಾರೆ.
’ವೀರಪ್ಪನ್’ ನಂತರದ ನನ್ನ ಮುಂದಿನ ಸಿನೇಮಾ ’ಗವರ್ನ್ಮೆಂಟ್’ ಮತ್ತು ಇದರ ಮುಖ್ಯ ಪಾತ್ರ ದಾವೂದ್ ಇಬ್ರಾಹಿಂ ಇರುವುದಾಗ ಅವರು ಟ್ವೀಟ್ ಮಾಡಿದ್ದಾರೆ.
ಈ ಎರಡು ಪ್ರಮುಖ ಪಾತ್ರಗಳಲ್ಲದೇ ಛೋಟಾ ರಾಜನ್ ಪತ್ನಿ ಸುಜಾತಾ, ಮೋನಿಕಾ ಬೇಡಿ, ರಾಷ್ಟ್ರೀಯ ಭದ್ರತಾ ಸಲಹೇಗಾರ ಅಜಿತ್ ದೋವಲ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಬಾಳಾ ಸಾಹೇಬ್ ಠಾಕ್ರೆ, ಅಬು ಸಲೇಂ, ಭೂಗತ ಪಾತಕಿ ಹಾಗೂ ಪ್ರಸ್ತುತ ರಾಜಕಾರಣಿ ಅರುಣ್ ಗೌಲಿ, ಛೋಟಾ ಶಕೀಲ್, ಅಬು ಸಲೇಮ್ ಅವರ ಕುರಿತ ಪಾತ್ರಗಳನ್ನೂ ಬಿಂಬಿಸಲಿದೆ ಎಂದು ವರ್ಮಾ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.