ಬೆಳ್ತಂಗಡಿ : ಗುರುವಾಯನಕೆರೆಯ ಪಾಂಡುರಂಗ ಭಜನಾ ಮಂದಿರದವರು ನಾಗರಿಕ ಸೇವಾ ಸಮಿತಿಯವರ ವಿರುದ್ದ ಬೆಳ್ತಂಗಡಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಪ್ಪು ಮಾಹಿತಿಯಿಂದಾಗಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಭಾಗವಹಿಸಿದೆ. ಈ ರೀತಿಯ ವೈಯುಕ್ತಿಕ ವಿಚಾರಗಳಲ್ಲಿ ಉಭಯ ಸಂಘಟನೆಗಳು ಯಾರ ಪರವಾಗಿ ನಿಲ್ಲುವುದಿಲ್ಲ. ಅಂದಿನ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದಕ್ಕೆ ವಿಷಾದವಿದೆ ಎಂದು ವಿಶ್ವಹಿಂದೂ ಪರಿಷತ್ತಿನ ಬೆಳ್ತಂಗಡಿ ಪ್ರಖಂಡ ಅಧ್ಯಕ್ಷ ತಾರಾನಾಥ ಪಿ.ಎಸ್ ತಿಳಿಸಿದ್ದಾರೆ.
ಬೆಳ್ತಂಗಡಿಯಲ್ಲಿ ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಚಾರ ತಿಳಿಸಿದ ಅವರು ಕಳೆದ ಜ. 23 ರಂದು ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಭಜನಾ ಮಂದಿರದ ಸಮಿತಿಯವರು ಪಾಂಡುರಂಗ ನಾಗರಿಕ ಸೇವಾ ಸಮಿತಿಯ ಕೆ ಸೋಮನಾಥ ನಾಯಕ್ ಹಾಗೂ ರಂಜನ್ ರಾವ್ ಹಾಗೂ ಟ್ರಸ್ಟಿಗಳು ಜಮೀನು ಅವ್ಯವಹಾರ ನಡೆಸಿರುವ ಬಗ್ಗೆ ಪೋಲೀಸ್ ಪ್ರಕರಣ ದಾಖಲಾಗಿರುವ ಬಗ್ಗೆ ಹಾಗೂ ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು. ಗೋಷ್ಠಿಯ ಮೊದಲು ಪಾಂಡುರಂಗ ಭಜನಾ ಮಂದಿರದ ಭಜನಾ ಸಪ್ತಾಹದ ಬಗ್ಗೆ ಮಾತ್ರ ಪತ್ರಿಕಾಗೋಷ್ಟಿ ಕರೆದಿರುವುದಾಗಿ ಬಜರಂಗದಳದ ಜಿಲ್ಲಾ ಸಂಚಾಲಕ ಭಾಸ್ಕರ ಧರ್ಮಸ್ಥಳ ಅವರು ತಿಳಿಸಿದ್ದರು.
ಹೀಗಾಗಿ ಪತ್ರಿಕಾಗೋಷ್ಠಿಗೆ ನಾವು ಹಾಜರಾಗಿದ್ದೆವು. ಆದರೆ ಅಲ್ಲಿ ನಾಗರಿಕ ಸೇವಾ ಸಮಿತಿಯ ವಿರುದ್ದದ ವಿಚಾರವನ್ನು ಮುಂದಿಡಲಾಗಿತ್ತು. ವಿವಾದದ ಬಗ್ಗೆ ನಮಗೆ ಯಾವುದೇ ಮಾಹಿತಿಯಿಲ್ಲವಾಗಿದೆ. ವೈಯುಕ್ತಿಕವಾದ ವಿವಾದಗಳಲ್ಲಿ ಸಂಘಟನೆ ಯಾರ ಬೆಂಬಲಕ್ಕೂ ನಿಲ್ಲುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರಲ್ಲದೆ ಭಾಗವಹಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಭಜರಂಗದಳದ ಮುಖಂಡ ದಿನೇಶ್ ಮುಗುಳಿ, ಚಂದ್ರಹಾಸ ಕುವೆಟ್ಟು, ಧನರಾಜ್ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.