ನವದೆಹಲಿ: ಸಿರಿಯಾದಲ್ಲಿ ಇಸಿಸ್ ಪರವಾಗಿ ಹೋರಾಡುತ್ತಿರುವ ಭಾರತೀಯ ಯುವಕರು ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವುದಕ್ಕಾಗಿ ಯೋಜನೆಗಳನ್ನು ರೂಪಿಸುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
2004ರಿಂದಲೂ ಭಾರತದಲ್ಲಿ ಇಸಿಸ್ ಭಯೋತ್ಪಾದಕರನ್ನು ನಿಯೋಜನೆ ಮಾಡುತ್ತಿದೆ, ಪ್ರಸ್ತುತ ಕನಿಷ್ಠ 60 ಮಂದಿ ಇಸಿಸ್ ಉಗ್ರರು ಭಾರತದಲ್ಲಿ ಸಕ್ರಿಯರಾಗಿದ್ದಾರೆ. ಈ ಹಿಂದೆ 23 ಮಂದಿ ಉಗ್ರರು ಇರಬಹುದು ಎಂದು ಊಹಿಸಲಾಗಿತ್ತು, ಆದರೀಗ ಈ ಸಂಖ್ಯೆ ೬೦ಕ್ಕೆ ಏರಿರುವುದು ಕಳವಳಕಾರಿಯಾಗಿದೆ.
ಈ ಉಗ್ರರಿಗೆ ಪ್ರಮುಖ ಧಾರ್ಮಿಕ ಸ್ಥಳಗಳಾದ ಹರಿದ್ವಾರ ಮತ್ತು ಪ್ರವಾಸಿ ತಾಣವಾದ ಗೋವಾ ಮುಂತಾದೆಡೆ ಸ್ಪೋಟಗಳನ್ನು ನಡೆಸಲು ತರಬೇತಿಗಳನ್ನು ನೀಡಲಾಗುತ್ತಿದೆ ಎನ್ನಲಾಗಿದೆ.
ಭಾರತದಲ್ಲಿ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯಲ್ಲಿ ಇದ್ದವರೇ ಸಿರಿಯಾಗೆ ಪಲಾಯಣ ಮಾಡಿ ಇಸಿಸ್ ಪಡೆಯನ್ನು ಸೇರಿಕೊಂಡಿದ್ದಾರೆ. 2008ರ ಮುಂಬಯಿ ದಾಳಿಯ ಬಳಿಕ ಈ ಸಂಘಟನೆಯನ್ನು ಸಂಪೂರ್ಣ ನಿರ್ನಾಮ ಮಾಡಲಾಯಿತು. ಆ ಬಳಿಕ ಅದರಲ್ಲಿದ್ದ ಉಗ್ರರು ಇಸಿಸ್ ಸೇರಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಆನ್ಲೈನ್ ಮೂಲಕ ಮುಸ್ಲಿಂ ಯುವಕರ ತಲೆಕೆಡಿಸಿಅವರನ್ನು ತಮ್ಮತ್ತ ಆಕರ್ಷಿಸುತ್ತಿದ್ದಾರೆ.
ಇದೀಗ ನಿಧಾನವಾಗಿ ಭಾರತದಲ್ಲಿನ ಇಸಿಸ್ ಜಾಲವನ್ನು ಭದ್ರತಾ ಸಂಸ್ಥೆಗಳು ಧ್ವಂಸ ಮಾಡುತ್ತಿವೆ. ಈಗಾಗಲೇ 14 ಮಂದಿಯನ್ನು ಬಂಧಿಸಲಾಗಿದ್ದು, ಇನ್ನೂ ಅನೇಕ ಮಂದಿಯ ಬಂಧನಕ್ಕೆ ಬಲೆ ಬೀಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.