ನವದೆಹಲಿ: ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಗೆ ಶುಕ್ರವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಮಹಾಮನ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ಗೆ ಚಾಲನೆ ನೀಡಿದರು. ಇದು ವಾರಣಾಸಿಯಿಂದ ದೆಹಲಿಗೆ ಸಂಚಾರ ನಡೆಸಲಿದೆ.
ಭೇಟಿಯ ಸಂದರ್ಭ ಅವರು ವಿಕಲಚೇತನರಿಗೆ ಇ-ರಿಕ್ಷಾಗಳನ್ನು ಹಂಚಿಕೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ‘ಸಮಾಜದಲ್ಲಿ ಬದುಕುತ್ತಿರುವ ನಾವೆಲ್ಲರೂ ಒಟ್ಟಾಗಿ ದಿವ್ಯಾಂಗದವರ ಬಗ್ಗೆ ಕಾಳಜಿಯನ್ನು ವಹಿಸಬೇಕು. ಒರ್ವ ಮನುಷ್ಯನಲ್ಲಿ ಏನು ಕಮ್ಮಿ ಇದೆ ಎಂಬುದನ್ನು ನೋಡಬಾರದು. ಆತನಲ್ಲಿ ಯಾವ ಅದ್ಭುತ ಸಾಮರ್ಥ್ಯವಿದೆ ಎಂಬುದನ್ನು ಗುರುತಿಸಬೇಕು’ ಎಂದರು.
ರಾಜಕೀಯ ವಿವಾದಗಳ ಬಗ್ಗೆ ಮಾತನಾಡಿದ ಅವರು, ರಾಜಕೀಯ ವಿರೋಧಿಗಳು ನನ್ನನ್ನು ವಿವಾದಗಳಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ನನ್ನ ದೃಷ್ಟಿ ನಿಮ್ಮ ಸಮಸ್ಯೆಗಳನ್ನು ನಿವಾರಿಸುವತ್ತಾ ಮಾತ್ರ ಇದೆ ಎಂದರು.
ಮಧ್ಯವರ್ತಿಗಳಿಂದಾಗಿ ಹಲವಾರು ಯೋಜನೆಗಳ ಫಲಗಳು ಅಗತ್ಯವಿರುವವರಿಗೆ ತಲುಪುತ್ತಿಲ್ಲ, ಇಂತಹ ಕಾರ್ಯಕ್ರಮಗಳು ಅಂತಹ ವ್ಯಕ್ತಿಗಳ ಮಧ್ಯಪ್ರವೇಶವನ್ನು ತಡೆಗಟ್ಟುತ್ತದೆ ಎಂದರು.
ವಾರಣಾಸಿಯಲ್ಲಿ ಅವರು ಭೀಮ್ ರಾವ್ ಅಂಬೇಡ್ಕರ್ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಭಾಗಿಯಾಗಲಿದ್ದಾರೆ, ಬಳಿಕ ಲಕ್ನೋದಲ್ಲಿ ಡಾ.ಭೀಮ್ ರಾವ್ ಅಂಬೇಡ್ಕರ್ ಮಹಾಸಭಾವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.