ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರ ಕಳೆದ 11 ತಿಂಗಳಲ್ಲಿ ಕೇವಲ ಜಾಹೀರಾತಿಗಾಗಿ ಬರೋಬ್ಬರಿ 60 ಕೋಟಿ ರೂಪಾಯಿಗಳನ್ನು ವ್ಯಯಮಾಡಿದೆ.
ಸರ್ಕಾರದ ಎಲ್ಲಾ ಇಲಾಖೆಗಳು ಪ್ರಿಂಟ್, ಟಿವಿ, ರೇಡಿಯೋ ಮತ್ತು ಔಟ್ಡೋರ್ ಪಬ್ಲಿಸಿಟಿಗೆ ಇದುವರೆಗೆ 60 ಕೋಟಿ ಖರ್ಚು ಮಾಡಿದೆ. ಇದೀಗ ಪ್ರಸ್ತುತ ನಡೆಯುತ್ತಿರುವ ಮತ್ತು ಅಂತ್ಯಗೊಂಡಿರುವ ಕೆಲ ಜಾಹೀರಾತುಗಳಿಗೆ ಮತ್ತೆ 35 ಕೋಟಿ ರೂಪಾಯಿ ಖರ್ಚಾಗಲಿದೆ ಎನ್ನಲಾಗಿದೆ.
ದೆಹಲಿ ಮಾಹಿತಿ ಮತ್ತು ಪ್ರಚಾರ ನಿರ್ದೇಶಕ ತಮ್ಮ ಒಟ್ಟು 526 ಕೋಟಿ ಜಾಹೀರಾತು ಬಜೆಟ್ನಲ್ಲಿ 25 ಕೋಟಿ ರೂಪಾಯಿಯನ್ನು ಬಿಡುಗಡೆಗೊಳಿಸಿದ್ದಾರೆ. ಸಮ-ಬೆಸ ನಿಯಮದ ವೇಳೆ ಜಾಹೀರಾತಿಗಾಗಿಯೇ 2 ಕೋಟಿ ವ್ಯಯವಾಗಿದೆ.
ತಮ್ಮ ಪಕ್ಷದ ಸಿದ್ಧಾಂತಗಳನ್ನು ಜನರಿಗೆ ತಲುಪಿಸಲು, ಲೆ.ಗವರ್ನರ್ ನಜೀಬ್ ಜಂಗ್ ಮತ್ತು ಕೇಂದ್ರ ಸರ್ಕಾರದ ವಿರುದ್ಧದ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುವುದಕ್ಕಾಗಿಯೇ ಇವರು ಹಲವಾರು ಜಾಹೀರಾತು, ಬ್ಯಾನರ್ಗಳನ್ನು ಹಾಕಿಸಿ ಹಣವನ್ನು ಪೋಲು ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.