ಬಿಕನೇರ್: ಭಾರತದ ಡೆನ್ಮಾಕ್ ಎಂದು ಕರೆಯಲ್ಪಡುವ ಬಿಕನೇರ್ನಲ್ಲಿ ಗೋವಿನ ಅಭಯಾರಣ್ಯವನ್ನು ಸ್ಥಾಪಿಸಲು ರಾಜಸ್ಥಾನ ಸರ್ಕಾರ ನಿರ್ಧರಿಸಿದೆ. ಇದು ದೇಶದ ಮೊದಲ ಗೋ ಅಭಯಾರಣ್ಯವಾಗಲಿದೆ.
ಗೋ ಪ್ರವಾಸೋದ್ಯಮದ ಮೂಲಕ ರಾಜ್ಯದ ಆರ್ಥಿಕ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಈ ಅಭಯಾರಣ್ಯವನ್ನು ಸ್ಥಾಪಿಸಲಾಗುತ್ತಿದೆ ಎಂದು ಗೋಪಾಲನ ಸಚಿವ ಒಟಾರಂ ದೇವಸಿ ತಿಳಿಸಿದ್ದಾರೆ.
ಮಧ್ಯಪ್ರದೇಶದ ಬಳಿಕ ಗೋವಿಗಾಗಿ ಸಚಿವಾಲಯವನ್ನು ಸ್ಥಾಪಿಸಿದ ದೇಶದ ಎರಡನೆ ರಾಜ್ಯ ರಾಜಸ್ಥಾನ. ಇದೀಗ ಅಲ್ಲಿ ಗೋವಿನ ಅಭಯಾರಣ್ಯ ಸ್ಥಾಪನೆಯಾಗುತ್ತಿದ್ದು, ಹೊಸ ಉದ್ಯೋಗವಕಾಶಗಳು ಸೃಷ್ಟಿಯಾಗುವ, ಹಾಲಿನ ಉತ್ಪಾದನೆ ಮತ್ತು ಬಯೋಗ್ಯಾಸ್ ಕಾಮಸ್ ಅಭಿವೃದ್ಧಿಗೊಳ್ಳುವ ನಿರೀಕ್ಷೆ ಇದೆ.
ಅಲ್ಲದೇ ಗೋವನ್ನು ಮಾರುವ, ಕೊಂಡುಕೊಳ್ಳುವ, ಉತ್ತಮ ತಳಿಗಳನ್ನು ಪೋಷಿಸುವ ಕಾರ್ಯಗಳು ಇಲ್ಲಿ ನಡೆಯಲಿದ್ದು, ಗೋ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಿದೆ.
ಗೋವು ರಕ್ಷಣೆಯ ಹೋರಾಟಗಾರ ಸುರಜ್ಮಲ್ ಸಿಂಗ್ ನೀಮ್ರಾನ ಅವರು ಈ ಯೋಜನೆಯ ಹರಿಕಾರನಾಗಿದ್ದು, ಬಿಕನೇರ್ನಿಂದ 70 ಕಿ.ಮೀ ದೂರದಲ್ಲಿರುವ ಅಮ್ರಪುರದಲ್ಲಿ ಗೋ ಅಭಯಾರಣ್ಯ ಸ್ಥಾಪನೆಗೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.