ನವದೆಹಲಿ: ದೆಹಲಿ ಸರ್ಕಾರ 15 ದಿನಗಳ ಕಾಲ ಜಾರಿಗೆ ತಂದಿದ್ದ ಸಮ-ಬೆಸ ಸಂಖ್ಯೆ ನಿಯಮಕ್ಕೆ ವೆಚ್ಚವಾದ ಒಟ್ಟು ಮೊತ್ತ ರೂ.20 ಕೋಟಿ.
ಇದರಲ್ಲಿ 14 ಕೋಟಿ ಮೊತ್ತ ಜನರಿಗೆ ಸಾರ್ವಜನಿಕ ಸಾರಿಗೆಯನ್ನು ನಿಯೋಜಿಸುವುದಕ್ಕೆ ವೆಚ್ಚವಾಗಿದೆ. 3.5ಕೋಟಿ ಮೊತ್ತ ನಾಗರಿಕ ರಕ್ಷಣಾ ಸ್ವಯಂಸೇವಕರಿಗೆ ಖರ್ಚಾಗಿದೆ. ಇವರು ಹೂವು ನೀಡುವ ಮೂಲಕ ಸಮ-ಬೆಸ ನಿಯಮವನ್ನು ಪಾಲಿಸುವಂತೆ ಜನರಿಗೆ ಉತ್ತೇಜನ ನೀಡುತ್ತಿದ್ದರು.
ಉಳಿದ 4 ಕೋಟಿಯನ್ನು ದೆಹಲಿ ಸರ್ಕಾರ ಜಾಹೀರಾತಿಗಾಗಿ ಖರ್ಚು ಮಾಡಿದೆ. ಇದರಲ್ಲಿ 3 ಕೋಟಿ ನಿಯಮ ಜಾರಿಗೊಳ್ಳುವ ಮುನ್ನ ಪ್ರಚಾರಕ್ಕಾಗಿ ಮತ್ತು 1 ಕೋಟಿ ಧನ್ಯವಾದ ಸಮರ್ಪನೆಯ ಜಾಹೀರಾತಿಗೆ ಖರ್ಚಾಗಿದೆ.
ಸಮ-ಬೆಸ ನಿಯಮ ಜಾರಿಯಾಗಿದ್ದ ವೇಳೆ ಸಾರಿಗೆ ಸಂಸ್ಥೆ ಹೆಚ್ಚುವರಿ 1,200 ಬಸ್ಗಳನ್ನು ತರಿಸಿಕೊಂಡಿತ್ತು. ಇದರ ಒಪ್ಪಂದದ ಪ್ರಕಾರ ೧ಕಿ.ಮೀಗೆ 42 ರೂಪಾಯಿ ದರ ನಿಗಧಿ ಮಾಡಲಾಗಿತ್ತು. ದಿನಕ್ಕೆ 225 ಕಿ.ಮೀಯ ದರ ಪಾವತಿಸಬೇಕಾಗಿತ್ತು. 1,200 ಬಸ್ನಂತೆ 13 ದಿನಕ್ಕೆ ಕನಿಷ್ಠ 14 ಕೋಟಿ ಖಾಸಗಿ ವಲಯಕ್ಕೆ ನೀಡಲಾಗಿದೆ ಎಂದು ದೆಹಲಿ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಈ ನಿಯಮ ಜಾರಿಯಲ್ಲಿರಲಿಲ್ಲ. ನಿಯಮ ಜಾರಿಗೆ 5 ಸಾವಿರ ಸ್ವಯಂ ಸೇವಕರನ್ನು ನಿಯೋಜಿಸಲಾಗಿತ್ತು, ಇವರಿಗೆ ದಿನಕ್ಕೆ 500.ರೂ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.