ಜೋಧ್ಪುರ: ರಾಜಸ್ಥಾನದ ಜೋಧ್ಪುರದಲ್ಲಿನ ’ಉಮೇದ್ ಭವನ್ ಪ್ಯಾಲೇಸ್’ ಇದೀಗ 2016 ರ ಜಗತ್ತಿನ ಅತ್ಯುತ್ತಮ ಹೋಟೆಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಟ್ರಿಪ್ ಅಡ್ವೈಸರ್ಗಳ 2016ರ ‘ಟ್ರಾವೆಲರ್ಸ್ ಚಾಯ್ಸ್’ ಅವಾರ್ಡ್ಗೆ ಈ ಹೋಟೆಲ್ ಆಯ್ಕೆಯಾಗಿದೆ. ಇಲ್ಲಿಗೆ ಆಗಮಿಸಿದ ಅತಿಥಿಗಳ ಪ್ರತಿಕ್ರಿಯೆಯನ್ನು ಪಡೆದು ಈ ಅವಾರ್ಡ್ ನೀಡಲಾಗಿದೆ.
840 ಅತಿಥಿಗಳು ಈ ಹೋಟೆಲ್ಗೆ 5ರಲ್ಲಿ 5 ಬಬಲ್ ರೇಟಿಂಗ್ ನೀಡಿದ್ದಾರೆ. ಈ ಹೋಟೆಲ್ನಲ್ಲಿ ಒಟ್ಟು 347 ರೂಮ್ಗಳಿವೆ.
ಮಹಾರಾಜ ಉಮೇದ್ ಸಿಂಗ್ ಅವರು 1928 ರಿಂದ 1943 ರವರೆಗೆ ಬರೋಬ್ಬರಿ 15 ವರ್ಷಗಳ ಅವಧಿಯಲ್ಲಿ ಈ ಹೋಟೆಲ್ನ್ನು ನಿರ್ಮಿಸಿದ್ದಾರೆ. ಇದು ಜೋಧ್ಪುರ್ ರಾಜ ಕುಟುಂಬದ ಪ್ರಮುಖ ನಿವಾಸವೂ ಇದಾಗಿತ್ತು.
ಪಾಶ್ಚಿಮಾತ್ಯ ಮತ್ತು ಪೂರ್ವ ಶೈಲಿಯಲ್ಲಿ ಇದನ್ನು ನಿರ್ಮಿಸಲಾಗಿದೆ, ದುಬಾರಿ ಪೀಠೋಪಕರಣಗಳು, ವಿದ್ಯುತ್ ಅಲಂಕಾರಗಳು, ಮಾರ್ಬಲ್ಗಳು ಈ ಹೋಟೆಲ್ಗಳು ಇನ್ನಷ್ಟು ಸೊಬಗನ್ನು ತಂದುಕೊಟ್ಟಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.