ನವದೆಹಲಿ: ಖ್ಯಾತ ನೃತ್ಯಗಾರ್ತಿ ಮೃಣಾಲಿನಿ ಸಾರಾಭಾಯ್ ಗುರುವಾರ ಅಹ್ಮದಾಬಾದ್ನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಬುಧವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಇಂದು ಬೆಳಿಗ್ಗೆ ಅವರು ಚಿಕಿತ್ಸೆ ಫಲಕಾರಿಯಾಗದೆ ತಮ್ಮ ಮನೆಯಲ್ಲೇ ಮೃತರಾಗಿದ್ದಾರೆ.
1918ರ ಮೇ 11ರಂದು ಜನಿಸಿದ ಇವರು, ಭಾರತೀಯ ಶಾಸ್ತ್ರೀಯ ನೃತ್ಯಪಟು, ನೃತ್ಯ ಸಂಯೋಜಕಿ ಹಾಗೂ ನೃತ್ಯ ಗುರುವಾಗಿ ಹೆಸರುವಾಸಿಯಾದವರು. ದರ್ಪಣಾ ಅಕಾಡಮಿಯ ಸಂಸ್ಥಾಪಕ ನಿರ್ದೇಶಕಿಯೂ ಆಗಿದ್ದರು. 18 ಸಾವಿರ ವಿದ್ಯಾರ್ಥಿಗಳಿಗೆ ಭರತನಾಟ್ಯಂ ಮತ್ತು ಕಥಕ್ಕಳಿ ಕಲಿಸಿದ ಹೆಮ್ಮೆ ಇವರದ್ದು.
97 ವರ್ಷದ ಮೃನಾಲಿನಿ ಅವರು 1992ರಲ್ಲಿ ಪದ್ಮಭೂಷಣ ಮತ್ತು 1965ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಬಾಜನರಾಗಿದ್ದರು. ಖ್ಯಾತ ವಿಜ್ಞಾನಿ ವಿಕ್ರಮ್ ಸಾರಾಭಾಯ್ ಅವರ ಪತ್ನಿಯಾಗಿರುವ ಇವರಿಗೆ ಕಾರ್ತಿಕೇಯ ಮತ್ತು ಮಲ್ಲಿಕಾ ಎಂಬ ಮಕ್ಕಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.