ನವದೆಹಲಿ: ಪಾನ್ ಮಸಾಲ, ತಂಬಾಕು ಪದಾರ್ಥಗಳನ್ನು ಪ್ರೋತ್ಸಾಹಿಸುವ ಸೆಲೆಬ್ರಿಟಿಗಳ ಪ್ರಚಾರದ ಬಗ್ಗೆ ತನಿಖೆ ನಡೆಸಲು ಜಾಹೀರಾತು ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಸ್ ಕೌನ್ಸಿಲ್ ಆಫ್ ಇಂಡಿಯಾ(ಎಎಸ್ಸಿಐ) ಮುಂದಾಗಿದೆ. ಇವರು ನಿಯಮಗಳ ಉಲ್ಲಂಘನೆ ಮಾಡುತ್ತಿದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ.
ದೆಹಲಿಯ ಸರ್ಕಾರ ಅಜಯ್ ದೇವ್ಗನ್, ಶಾರುಖ್ ಖಾನ್ ಮುಂತಾದ ನಟರಿಗೆ ತಂಬಾಕು ಪದಾರ್ಥಗಳನ್ನು ಜಾಹೀರಾತಿನಲ್ಲಿ ಪ್ರೋತ್ಸಾಹಿಸದಂತೆ ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ ಎಎಸ್ಸಿಐ ಈ ಬಗ್ಗೆ ತನಿಖೆಗೆ ಮುಂದಾಗಿದೆ.
ಇಂತಹ ಜಾಹೀರಾತುಗಳ ಬಗೆಗೆ ನಮಗೆ ದೂರುಗಳು ಬಂದಿವೆ, ಈ ಬಗ್ಗೆ ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಸಂಬಂಧಿತ ಜಾಹೀರಾತುದಾರರನ್ನು ಸಂಪರ್ಕಿಸಿ ಅಗತ್ಯ ಸುಧಾರಣೆಗಳನ್ನು ಮಾಡುವಂತೆ ಕೋರುತ್ತೇವೆ ಮತ್ತು ತಮ್ಮ ನಿರ್ಧಾರವನ್ನು ಗ್ರಾಹಕರ ದೂರುಗಳ ಸಮಿತಿಗೆ ತಿಳಿಸುವತೆ ಸೂಚಿಸಿದ್ದೇವೆ ಎಂದು ಎಎಸ್ಸಿಐ ಹೇಳಿದೆ.
ಪಾನ್ ಮಸಾಲ ಮತ್ತು ಸುಪಾರಿಯಂತಹ ಪದಾರ್ಥಗಳನ್ನು ನಿಷೇಧಿಸಲಾಗಿಲ್ಲ, ಆದರೆ ಇವುಗಳ ಜಾಹೀರಾತು ನೀಡುವಾಗ ಆರೋಗ್ಯಕ್ಕೆ ಹಾನಿಕಾರಕ ಮತ್ತು ಅಪ್ರಾಪ್ತರಿಗೆ ನೀಡಬೇಕೆಂಬ ಸಂದೇಶ ಬಿತ್ತರಿಸಬೇಕು ಎಂದಿದೆ.
ದೆಹಲಿ ಸರ್ಕಾರ ಅಜಯ್ ದೇವ್ಗನ್, ಶಾರುಖ್ ಖಾನ್, ಸೈಫ್ ಅಲಿ ಖಾನ್, ಗೋವಿಂದ, ಅರ್ಬಾಝ್ ಖಾನ್, ಸನ್ನಿ ಲಿಯೋನ್ ಅವರಿಗೆ ಪತ್ರ ಬರೆದು ತಂಬಾಕು ಪದಾರ್ಥಗಳನ್ನು ಜಾಹೀರಾತಿನಲ್ಲಿ ಪ್ರೋತ್ಸಾಹಿಸದಂತೆ ಸೂಚಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.