ನವದೆಹಲಿ: ಸದ್ದಿಲ್ಲದೆ ಇಸಿಸ್ ವಿರುದ್ಧ ಹೋರಾಡಲು ಪಶ್ಚಿಮ ಉತ್ತರಪ್ರದೇಶದಲ್ಲಿ ಸೈನ್ಯವೊಂದು ತಯಾರಾಗುತ್ತಿದೆ. ಅದರೆ ಹೆಸರು ’ಧರ್ಮಸೇನಾ’ ಇಸ್ಲಾಮಿಕ್ ಸ್ಟೇಟ್ಸ್ ವಿರುದ್ಧ ಹೋರಾಡಲು ಸಜ್ಜುಗೊಂಡಿರುವ ಹಿಂದೂ ಸೈನ್ಯವಿದು.
ಹಿಂದೂ ಸ್ವಾಭಿಮಾನ್ ಎಂಬ ಸಂಘಟನೆ ’ಧರ್ಮಸೇನೆ’ಯನ್ನು ಹುಟ್ಟು ಹಾಕಿದ್ದು, ಇದರ ಕೇಂದ್ರ ಘಾಜಿಯಾಬಾದ್ನ ದಸ್ನಾದಲ್ಲಿದೆ. ಇದರಲ್ಲಿ ಒಟ್ಟು 15 ಸಾವಿರ ಸೈನಿಕರಿದ್ದಾರೆ. ತಮ್ಮ ಧರ್ಮಕ್ಕಾಗಿ ಹೋರಾಡುವ, ಪ್ರಾಣತ್ಯಾಗ ಮಾಡುವ ಶಪಥ ಮಾಡಿದ್ದಾರೆ.
2020ರಲ್ಲಿ ಪಶ್ಚಿಮ ಉತ್ತರಪ್ರದೇಶವನ್ನು ಇಸಿಸ್ ವಶಪಡಿಸಿಕೊಳ್ಳುವ ಆತಂಕ ಹಿಂದೂ ಸ್ವಾಭಿಮಾನ್ ಸಂಘಟನೆಗಿದೆ, ಹೀಗಾಗಿ ಅದು ಧರ್ಮಸೇನಾವನ್ನು ರಚಿಸಿದೆ. ಇದುವರೆಗೆ 50 ತರಬೇತಿ ಶಿಬಿರಗಳನ್ನು ನಡೆಸಿದೆ. ಖಡ್ಗಗಳನ್ನು, ಶಸ್ತ್ರಗಳನ್ನು ಬಳಸುವ ವಿಧಾನವನ್ನು ಇವರಿಗೆ ಹೇಳಿಕೊಡಲಾಗಿದೆ.
ಈ ರೀತಿಯ ಸಮಗಟನೆ ಅಸ್ತಿತ್ವದಲ್ಲಿ ಇರುವ ಬಗ್ಗೆ ನಮಗೆ ಯಾವ ಮಾಹಿತಿಯೂ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.