ಆಗ್ರಾ: ಯೋಜನೆ ಕಾರ್ಯರೂಪಕ್ಕೆ ಬಂದರೆ ಪೋಸ್ಟ್ಮ್ಯಾನ್ಗಳು ಇನ್ನು ಮುಂದೆ ಸೈಕಲ್ನಲ್ಲಲ್ಲ ಬೈಕ್ನಲ್ಲಿ ಪತ್ರಗಳನ್ನು ಹಂಚಲಿದ್ದಾರೆ. ಪೋಸ್ಟಲ್ ಇಲಾಖೆ ಇಂತಹದೊಂದು ಮಹತ್ವದ ಯೋಜನೆ ಜಾರಿಗೊಳಿಸಲು ನಿರ್ಧರಿಸಿದೆ.
ಪೋಸ್ಟ್ ಆಫೀಸ್ಗಳು ವಸ್ತುಗಳನ್ನು ವಾರಸುದಾರರಿಗೆ ತಲುಪಿಸುವಲ್ಲಿ ಮಹತ್ವದ ಕಾರ್ಯವನ್ನು ಮಾಡುತ್ತಿದೆ, ಇದೀಗ ಇ-ಕಾಮರ್ಸ್ ಕಂಪನಿಗಳ ಸಹಭಾಗಿತ್ವದೊಂದಿಗೆ ಬೈಕ್ಗಳನ್ನು ನೀಡಿದರೆ ಪೋಸ್ಟ್ಮ್ಯಾನ್ಗಳ ಕಾರ್ಯ ಮತ್ತಷ್ಟು ಸುಲಭವಾಗಲಿದೆ.
ಒಂದು ಬಾರಿ ಬೈಕ್ಗಳು ಕಾರ್ಯರೂಪಕ್ಕೆ ಇಳಿದರೆ, ಅದರ ಬಳಿಕ ಬ್ಯಾಟರಿ ಚಾಲಿತ ರಿಕ್ಷಾಗಳು ದೊಡ್ಡ ದೊಡ್ಡ ಪಾರ್ಸೆಲ್ಗಳ ಹಂಚಿಕೆಗೆ ರಸ್ತೆಗಿಳಿಯಲಿವೆ.
ಅಲ್ಲದೇ ಪೋಸ್ಟ್ಮ್ಯಾನ್ಗಳಿಗೆ ಪತ್ರ ದೊರೆತ ವೇಳೆ, ಅದನ್ನು ಅವರು ಸಂಬಂಧಪಟ್ಟವರಿಗೆ ತಲುಪಿಸಿದ ಸಂದರ್ಭ ಎಲ್ಲವನ್ನೂ ಟ್ರ್ಯಾಕ್ ಮಾಡಲು ಲೆಟರ್ ಬಾಕ್ಸ್ಗಳ ಮೇಲೆ ಜಿಪಿಎಸ್ ಡಿವೈಸ್ಗಳನ್ನೂ ಅಳವಡಿಸಲಾಗುತ್ತಿದೆ.
ಆಗ್ರಾದಲ್ಲಿ ಇದನ್ನು ಮೊದಲಿಗೆ ಪ್ರಯೋಗಾರ್ಥವಾಗಿ ಜಾರಿಗೊಳಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.