ಪಣಜಿ: ಜಗತ್ತಿನ ಅತೀ ಅಮಾನುಷ ಉಗ್ರ ಸಂಘಟನೆ ಇಸಿಸ್ ಇದೀಗ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರನ್ನು ಕೊಲ್ಲುವ ಬೆದರಿಕೆಯನ್ನೊಡ್ಡಿದೆ.
ಇಸಿಸ್ ಉಗ್ರ ಸಂಘಟನೆಯ ಸಹಿವುಳ್ಳ ಅನಾಮಧೇಯ ಪತ್ರವೊಂದು ರಾಜ್ಯ ಕಾರ್ಯದರ್ಶಿಯವರಗೆ ಬಂದಿದ್ದು, ಇದರಲ್ಲಿ ಮೋದಿ ಮತ್ತು ಪರಿಕ್ಕರ್ ಅವರನ್ನು ಕೊಲ್ಲುವ ಬೆದರಿಕೆಯನ್ನೊಡ್ಡಲಾಗಿದೆ.
ಇದೀಗ ಈ ಪತ್ರವನ್ನು ಗೋವಾ ಪೊಲೀಸರು ಎಲ್ಲಾ ಪೊಲೀಸ್ ಸ್ಟೇಶನ್ಗಳಿಗೆ ರವಾನಿಸಿದ್ದು, ಈ ಬಗೆಗಿನ ತನಿಖೆಯನ್ನು ಭಯೋತ್ಪಾದನಾ ನಿಗ್ರಹ ದಳಕ್ಕೆ ಒಪ್ಪಿಸಿದೆ.
ಪತ್ರದ ಬಗ್ಗೆ ತನಿಖೆ ನಡೆಯುತ್ತಿದ್ದು, ತಕ್ಷಣವೇ ಇದರ ಮೂಲವನ್ನು ಕಂಡುಹಿಡಿಯಲಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಗೋಹತ್ಯೆಯ ಮೇಲಿನ ನಿಷೇಧದ ವಿರುದ್ಧ ಈ ಪತ್ರದಲ್ಲಿ ಕಿಡಿಕಾರಲಾಗಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.