ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದ ಬಗ್ಗೆ ಸೋಮವಾರ ಅಂತಿಮ ತೀರ್ಪನ್ನು ನೀಡಿರುವ ಬಿಸಿಸಿಐನ ಶಿಸ್ತುಪಾಲನಾ ಸಮಿತಿ, ಆರೋಪಿಗಳಾದ ಅಜಿತ್ ಚಾಂಡಿಲಾ ಅವರಿಗೆ ಅಜೀವ ನಿಷೇಧ ಮತ್ತು ಹಿಕೆನ್ ಶಾ ಅವರಿಗೆ 5 ವರ್ಷಗಳ ನಿಷೇಧವನ್ನು ಹೇರಿದೆ.
ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಅವರ ನೇತೃತ್ವದ ಜ್ಯೋತಿರಾಧಿತ್ಯ ಸಿಂಧಿಯಾ ಮತ್ತು ನಿರಂಜನ್ ಶಾ ಅವರನ್ನೊಳಗೊಂಡ ಸಮಿತಿ ಇಂದು ಅಂತಿಮ ತೀರ್ಪನ್ನು ಪ್ರಕಟಗೊಳಿಸಿತು.
ಇಬ್ಬರು ಆರೋಪಿಗಳು ಡಿ.24ರಂದು ಸಮಿತಿ ಮುಂದೆ ಹಾಜರಾಗಿದ್ದರು, ತಮ್ಮ ಮೇಲಿನ ಆರೋಪದ ಬಗ್ಗೆ ಲಿಖಿತ ಉತ್ತರವನ್ನು ಜ.4ರೊಳಗೆ ನೀಡುವಂತೆ ಇವರಿಗೆ ತಿಳಿಸಲಾಗಿತ್ತು. ಆ.5ರಂದು ಇವರು ಉತ್ತರ ನೀಡಿದ್ದರು.
ಚಾಂಡಿಲಾ ರಾಜಸ್ಥಾನ್ ರಾಯಲ್ಸ್ ಆಟಗಾರನಾಗಿದ್ದು, 2013ರ ಸ್ಪಾಟ್ ಫಿಕ್ಸಿಂಗ್ ಸಂಬಂಧ ಬಂಧಿತನಾಗಿದ್ದ. ಶಾ ಮುಂಬಯಿ ರಣಜಿ ಆಟಗಾರ, ಈತ ಬಿಸಿಸಿಐನ ಭ್ರಷ್ಟಾಚಾರ ನಿಯಮವನ್ನು ಉಲಂಘಿಸಿದ ಆರೋಪಕ್ಕೆ ಗುರಿಯಾಗಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.