ಘಾಝಿಯಾಬಾದ್: ಈಗಾಗಲೇ ಆಗ್ರಾದಲ್ಲಿ ’Sheroes Hangouts’ ಎಂಬ ಕೆಫೆಯನ್ನು ಆರಂಭಿಸಿ ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಲು ಪ್ರಯತ್ನಿಸಿರುವ ಆ್ಯಸಿಡ್ ದಾಳಿ ಸಂತ್ರಸ್ಥರು ಇದೀಗ ಘಾಝಿಯಾಬಾದ್ನಲ್ಲಿ ಹೊಸ ಲಾಂಜ್-ಕಮ್-ಸ್ಪಾ ಸ್ಥಾಪಿಸಲು ನಿರ್ಧರಿಸಿದ್ದಾರೆ.
ಈ ಲಾಂಜ್ ಸ್ಪಾ ಮತ್ತು ಸಲೂನ್ ಹೊಂದಲಿದೆ. ಆಗ್ರಾ, ವಾರಣಾಸಿ, ಉದಯಪುರ್, ಲಕ್ನೌ, ದೆಹಲಿಗಳಲ್ಲಿ ಆ್ಯಸಿಡ್ ಸಂತ್ರಸ್ಥರಿಂದ ಕೆಫೆ ಆರಂಭಿಸುವ ಯೋಜನೆ ಇದೆ ಎಂದು ಸರ್ಕಾರೇತರ ಸಂಸ್ಥೆ ’ಛಾಂವ್ ಫೌಂಡೇಶನ್’ನ ಯೋಜನಾ ವ್ಯವಸ್ಥಾಪಕ ಸದಸ್ಯ ಪಾರ್ಥ ಸಾರಥಿ ಹೇಳಿದ್ದಾರೆ.
ಆಗ್ರಾ, ಘಾಝಿಯಾಬಾದ್ ಸೇರಿದಂತೆ ನಾಲ್ಕು ಪ್ರಮುಖ ನಗರಗಳಲ್ಲಿ Sheroes Hangouts ಶಾಖೆಗಳ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಇದರ ಮುಂಭಾಗದಲ್ಲಿ ಕೆಫೆ ನಿರ್ಮಿಸಲಾಗುದು ಎಂದು ಪಾರ್ಥ ಸಾರಥಿ ತಿಳಿಸಿದ್ದಾರೆ.
2004ರಲ್ಲಿ ಸಂಭವಿಸಿದ ಘೋರ ಆ್ಯಸಿಡ್ ದಾಳಿಯಲ್ಲಿ ಸೋನಿಯಾ ಚೌಧರಿ ತನ್ನ ಮುಖದ ಸ್ವರೂಪವನ್ನೇ ಕಳೆದುಕೊಂಡಿದ್ದರು, ಅವರ ಜೀವನೋಪಾಯ ಹಾಗೂ ಪುರ್ನವಸತಿಗೆ ಸಹಕರಿಸುವ ಉದ್ದೇಶದಿಂದ ಈ ಯೋಜನೆ ಕೈಗೊಳ್ಳಲಾಗಿದೆ.
ಹಿಂದಿ ಚ್ಯಾನೆಲ್ ಕಲರ್ಸ್ನಲ್ಲಿ ’ಮಿಷನ್ ಸಪ್ನೆ ಸೀಸನ್ 2’ ಟಿವಿ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿರುವ ಸೋನಿಯಾಗೆ ಸೌಂದರ್ಯ ತಜ್ಞೆ ಶಹನಾಜ್ ಹುಸೇನ್ ತರಬೇತಿ ನೀಡಲು ಆಹ್ವಾನಿಸಿದ್ದಾರೆ. ಸೋನಿಯಾ ಅವರು ಆ್ಯಸಿಡ್ ದಾಳಿ ವಿರುದ್ಧದ ’ಸ್ಟಾಪ್ ಆ್ಯಸಿಡ್ ಅಟ್ಯಾಕ್’ ಪ್ರಚಾರ ಕಾರ್ಯ ಹಾಗೂ ’ಛಾಂವ್’ನಲ್ಲಿ ಕೆಲಸ ಮುಂದುವರಿಸುವ ಭರವಸೆ ವ್ಯಕ್ತಪಡಿಸಿದ್ದಾರೆ.
ಆ್ಯಸಿಡ್ ದಾಳಿಯಲ್ಲಿ ಬದುಕಳಿದ ಇನ್ನೋರ್ವ ಮಹಿಳೆ ಲಕ್ಷ್ಮೀ ಸಾ ಅವರನ್ನು ಫ್ಯಾಷನ್ ಬ್ರ್ಯಾಂಡ್ ’Viva N Diva’ ರಾಯಭಾರಿಯಾಗಿ ನೇಮಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.