ನವದೆಹಲಿ: ಹಣ್ಣುಗಳ ಉತ್ಪಾದನೆಯಲ್ಲಿ ಭಾರತ ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದು, ಜಗತ್ತಿನ ಎರಡನೇ ಅತೀದೊಡ್ಡ ಹಣ್ಣು ಬೆಳೆಯುವ ರಾಷ್ಟ್ರವಾಗಿ ಹೊರಹೊಮ್ಮಿದೆ. ಮೊದಲ ಸ್ಥಾನದಲ್ಲಿ ಚೀನಾವಿದೆ.
ತರಕಾರಿ ಉತ್ಪಾದನೆಗಿಂತಲೂ ಭಾರತದಲ್ಲಿ ಹಣ್ಣುಗಳ ಉತ್ಪಾದನೆ ಶೀಘ್ರಗತಿಯಲ್ಲಿ ಬೆಳೆಯುತ್ತಿದೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ ಎಂದು ಕೃಷಿ ಸಚಿವಾಲಯದ ’ಹೊರ್ಟಿಕಲ್ಚರ್ ಸ್ಟ್ಯಾಟಿಸ್ಟಿಕ್ಸ್ ಅಟ್ ಅ ಗ್ಲಾನ್ಸ್ 2015’ ಎಂಬ ವರದಿಯಿಂದ ತಿಳಿದು ಬಂದಿದೆ.
ರಫ್ತಿನಲ್ಲಿ ನಂ.1 ಸ್ಥಾನವನ್ನು ದ್ರಾಕ್ಷಿ ಪಡೆದಿದೆ. 2014-15ರ ಸಾಲಿನಲ್ಲಿ 1,086 ಕೋಟಿ ಮೌಲ್ಯದ ಒಟ್ಟು 107.3 ಸಾವಿರ ಟನ್ ದ್ರಾಕ್ಷಿ ರಫ್ತಾಗಿದೆ. ಬಾಳೆಹಣ್ಣು ಮತ್ತು ಮಾವಿನಹಣ್ಣು ಕೂಡ ರಫ್ತಿನಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಂಡಿದೆ.
ಆಂಧ್ರಪ್ರದೇಶದ ಚಿತ್ತೂರು ಮತ್ತು ಅನಂತಪುರ್, ಕಾಶ್ಮೀರದ ಬಾರಮುಲ್ಲಾ, ತೆಲಂಗಾಣದ ನಲಗೊಂಡ, ಸಾಗರ್, ಮಧ್ಯಪ್ರದೇಶದ ಶಹದೋಲ್, ಪಶ್ಚಿಮಬಂಗಾಳದ ಡಾರ್ಜಿಲಿಂಗ್, ಮಹಾರಾಷ್ಟ್ರದ ಔರಂಗಬಾದ್, ಜಲ್ಗೊಂನ್, ಸಾಂಗ್ಲಿ ಭಾರತದ ಹಣ್ಣು ಬೆಳೆಯುವ ಊರುಗಳ ಭೂಪಟದಲ್ಲಿ ಸ್ಥಾನ ಪಡೆದುಕೊಂಡಿದೆ.
ರಾಜ್ಯಗಳ ಲೆಕ್ಕದಲ್ಲಿ ಹಣ್ಣುಗಳ ಉತ್ಪಾದನೆ ಲೆಕ್ಕ ಹಾಕಿದರೆ, ಮಹಾರಾಷ್ಟ್ರ ನಂ.1 ಸ್ಥಾನ ಪಡೆಯುತ್ತದೆ, ಬಳಿಕ ಆಂಧ್ರಪ್ರದೇಶ, ಗುಜರಾತ್, ತಮಿಳುನಾಡು, ಉತ್ತರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡು ಸ್ಥಾನಗಳನ್ನು ಪಡೆದಿವೆ.
ಚೀನಾ ಒಟ್ಟು 154.364 ಮಿಲಿಯನ್ ಟನ್ ಹಣ್ಣುಗಳನ್ನು ಉತ್ಪಾದಿಸಿದರೆ, ಭಾರತ 82.631 ಮಿಲಿಯನ್ ಟನ್ ಹಣ್ಣುಗಳನ್ನು ಉತ್ಪಾದಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.