ಮಂಗಳೂರು : ಕಾಶಿಮಠಾಧೀಶರಾದ ಶ್ರೀಮದ್ ಸುಧೀಂದ್ರತೀರ್ಥ ಸ್ವಾಮೀಜಿಯವರು ವೃಂದಾವನಸ್ಥರಾದ ವಿಷಯ ದು:ಖವನ್ನು ತಂದಿದೆ. ಶ್ರೀಗಳು ಗೌಡ ಸರಸ್ವತ ಬ್ರಾಹ್ಮಣರ ಸಮುದಾಯಕ್ಕೆ ಮಾತ್ರ ಸೀಮೀತರಾಗಿರದೆ ಸಮಸ್ಥ ಹಿಂದೂ ಬಾಂಧವರ ಯತಿಗಳೂ ಆಗಿದ್ದರು.
ಅವರ ನಿಧನದಿಂದ ದೇಶ ಅಮೋಘ ರತ್ನವೊಂದನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ಶ್ರೀಗಳ ಅಸಂಖ್ಯಾತ ಭಕ್ತ ವೃಂದದವರಿಗೂ ಹಾಗೂ ಅವರ ಶಿಷ್ಯಂದಿರಿಗೂ ಅವರ ನಿಧನದ ದು:ಖವನ್ನು ಸಹಿಸಲು ಪರಮಾತ್ಮ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತಾ ಶ್ರೀಗಳ ದಿವ್ಯಾತ್ಮಕ್ಕೆ ಚಿರ ಶಾಂತಿಯನ್ನು ಕೋರಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.