ಮಂಗಳೂರು : ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಸಲಹಾ ಮಂಡಳಿಯ ಸಭೆಯು ಬಲ್ಲಾಳ್ಬಾಗ್ನ ಪತ್ತುಮಡಿ ಸೌಧದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿತು.
2016 ನೇ ಮೇ ತಿಂಗಳಲ್ಲಿ ಮಂಗಳೂರಿನಲ್ಲಿ ಟ್ರಸ್ಟ್ನ ಸೇವಾ ಯೋಜನೆಗಳ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳುವುದರ ಬಗ್ಗೆ ಚರ್ಚಿಸಲಾಯಿತು. ಮುಖ್ಯವಾಗಿ ಅಂದು ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರ, ಯಕ್ಷಗಾನ ವೈಭವ, ತಾಳ ಮದ್ದಳೆ ಕಾರ್ಯಕ್ರಮಗಳ ಜೊತೆ ಅಶಕ್ತ ಕಲಾವಿದರಿಗೆ ಧನ ಸಹಾಯವನ್ನು ನೀಡುವುದಾಗಿ ತೀರ್ಮಾನಿಸಲಾಯಿತು. ೨೦೧೬ನೇ ಸಾಲಿನಿಂದ `ಪಟ್ಲ ಪ್ರಶಸ್ತಿ’ಯನ್ನು ಹಿರಿಯ ಅರ್ಹ ಕಲಾವಿದರಿಗೆ ನೀಡುವ ಕುರಿತು ಚರ್ಚಿಸಲಾಯಿತು.
ಅಶಕ್ತ ಕಲಾವಿದರಿಂದ ಅರ್ಜಿ ಆಹ್ವಾನ : ಸಮಾರಂಭದಲ್ಲಿ ತೆಂಕು ಮತ್ತು ಬಡಗು ತಿಟ್ಟಿನ ಸುಮಾರು 15 ಮಂದಿ ಅಶಕ್ತ ಕಲಾವಿದರನ್ನು ಗುರುತಿಸಿ ಧನಸಹಾಯವನ್ನು ನೀಡಲು ಸಭೆಯಲ್ಲಿ ತೀರ್ಮಾನಿಸ ಲಾಗಿದ್ದು ಅಶಕ್ತ ಕಲಾವಿದರು ತಮ್ಮ ಸ್ವವಿವರಗಳೊಂದಿಗೆ ಟ್ರಸ್ಟಿನ ಕಛೇರಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಅರ್ಜಿ ಸಲ್ಲಿಸುವ ಕಛೇರಿಯ ವಿಳಾಸ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್. ಪ್ಲಾಟ್ ನಂಬ್ರ 202, ಕಮಲದೀಪ್ ಅಕಶ್ರತ್ ರೆಸಿಡೆನ್ಸಿ, ೨ನೇ ಮಹಡಿ, ಅಡುಮರೋಳಿ ಮಾರಿಕಾಂಬ ದೇವಸ್ಥಾನ, ನಂತೂರು ಮಂಗಳೂರು ಅಥವಾ ಶಾಪ್ ನಂಬ್ರ 16, 2ನೇ ಮಹಡಿ ಎಂಪಾಯರ್ ಮಾಲ್ ಎಂ.ಜಿ.ರಸ್ತೆ ಮಂಗಳೂರು ಇಲ್ಲಿಗೆ ಕಳುಹಿಸಬಹುದಾಗಿದೆ.
ಸಭೆಯಲ್ಲಿ ಟ್ರಸ್ಟಿನ ಗೌರವಾಧ್ಯಕ್ಷರಾದ ದೇವಿ ಪ್ರಸಾದ್ ಶೆಟ್ಟಿ ಕಲ್ಲಾಡಿ, ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸುದೇಶ ರೈ ಸಿಎ, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ಜಿ.ಪಂ. ಸದಸ್ಯ ಸಂತೋಷ್ಕುಮಾರ್ ರೈ ಬೋಳಿಯಾರು, ಉಪಾಧ್ಯಕ್ಷರಾದ ಸುಧೀರ್ ಭಟ್ ಎಕ್ಕಾರು, ಅಶೋಕ್ ಶೆಟ್ಟಿ ಪೆರ್ಮುದೆ, ಐಕಳ ಗಣೇಶ್ ಶೆಟ್ಟಿ, ರಾಜೀವ ಗುರುಪುರ, ಉದಯಾನಂದ ಶೆಟ್ಟಿ, ಜಗದೀಶ ಶೆಟ್ಟಿ, ಸಂದೇಶ ಶೆಟ್ಟಿ, ಪ್ರಮೋದ್ ಶೆಟ್ಟಿ, ಡಾ| ಬಾಲಚಂದ್ರ ಶೆಟ್ಟಿ, ಸದಾನಂದ ರೈ, ಸತೀಶ್ ಶೆಟ್ಟಿ, ಹಾಗೂ ಟ್ರಸ್ಟಿನ ಸದಸ್ಯರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.