ಬೆಳ್ತಂಗಡಿ : ತಣ್ಣೀರುಪಂತ ಗ್ರಾಮದ ಪಾಲೇದು ರಸ್ತೆ ಕಾಂಕ್ರೀಟಿಕರಣ ಬಗ್ಗೆ ತಾಲೂಕು ಪಂಚಾಯತ್ ಅನುದಾನದಲ್ಲಿ ರೂ. 5 ಲಕ್ಷ , ಜಿ.ಪಂ. ಅನುದಾನದಲ್ಲಿ ರೂ. 4.18 ಲಕ್ಷ, ಜಿ.ಪಂ. ಅಧ್ಯಕ್ಷರ ನಿಧಿಯಲ್ಲಿ ರೂ. 2 ಲಕ್ಷ ಮತ್ತು ಲೋಕಸಭಾ ಸದಸ್ಯರ ನಿಧಿಯಲ್ಲಿ ರೂ. 5 ಲಕ್ಷ, ಸದ್ರಿ ರಸ್ತೆಯಲ್ಲಿ ಮೋರಿ ರಚನೆ ಬಗ್ಗೆ ರೂ. 1.68 ಲಕ್ಷ, ರಸ್ತೆ ಡಾಮರೀಕರಣ ಬಗ್ಗೆ ಜಿಲ್ಲಾ ಪಂ. ಸದಸ್ಯರ ನಿಧಿಯಲ್ಲಿ ರೂ. 3.50 ಲಕ್ಷ ಹೀಗೆ ಒಟ್ಟು ರೂ. 21.36 ಲಕ್ಷ ಕಾಂಕ್ರೀಟಿಕರಣ ಮತ್ತು ರೂ. 40 ಸಾವಿರ ಪಾಲೇದು ಕಟ್ಟಡ ಮುದೇಲು ರಸ್ತೆ ಅಭಿವೃದ್ಧಿಗೆ ಅನುದಾನವನ್ನು ಇಡಲಾಗಿದ್ದು ಅದರ ಕಾಮಗಾರಿ ಆಗಿದೆ. ಈಗಾಗಲೇ ತಾ.ಪಂ. ಅಧ್ಯಕ್ಷರ ವತಿಯಿಂದ ವೆಚ್ಚ ಮಾಡಲು ಅನುದಾನ ದೊರಕಿಸಿಕೊಟ್ಟಿದ್ದೇನೆ ಎಂದು ತಾ. ಪಂ. ಅಧ್ಯಕ್ಷೆ ಜಯಂತಿ ಪಾಲೇದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವರು ಮಾಧ್ಯಮದಲ್ಲಿ ಸೇತುವೆ ಬೇಡಿಕೆ ಈಡೇರದ ಆಕ್ರೋಶ ಎಂಬ ವರದಿಯ ಬಗ್ಗೆ ಸ್ಪಷ್ಟನೆ ನೀಡಿ ಈ ಪ್ರಕಟಣೆ ನೀಡಿದ್ದಾರೆ. ರಸ್ತೆಯಲ್ಲಿನ ಸಂಪರ್ಕ ಸೇತುವೆ ಹಾಗೂ ರಸ್ಗೆ ಬಗ್ಗೆ ಈಗಾಗಲೇ ಉಸ್ತುವಾರಿ ಸಚಿವರಿಗೆ ಮತ್ತು ಶಾಸಕರಿಗೆ ಮನವಿಯನ್ನು ಸಲ್ಲಿಸಲಾಗಿದೆ. ಅದು ಬಂಟ್ವಾಳ- ಬೆಳ್ತಂಗಡಿ ಸಂಪರ್ಕ ಸೇತುವೆ ಆಗಿರುವುದರಿಂದ ಸರಕಾರದ ಮಟ್ಟದಲ್ಲಿ ಆಗಬೇಕಾಗಿದೆ. ಪಾಲೇದು ಕುದ್ರಡ್ಕದ ರಸ್ತೆ ಬಗ್ಗೆ ಶಾಸಕರು ನಮ್ಮ ಗ್ರಾಮ ನಮ್ಮ ರಸ್ತೆಯಲ್ಲಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಪಾಲೇದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.