ನವದೆಹಲಿ: ಉತ್ತಮ ಒಳಾಂಗಣ, ಬಣ್ಣ, ಅದ್ಭುತ ಸೌಂದರ್ಯವನ್ನು ಒಳಗೊಂಡ ಅತ್ಯಾಧುನಿಕ ಮಾಡೆಲ್ ರೇಕ್ ರೈಲನ್ನು ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಪರಿಶೀಲಿಸಿದ್ದಾರೆ. ಮಾಡೆಲ್ ರೇಕ್ ಎಂಬುದು ಪ್ರಯಾಣಿಕರನ್ನು ಹೊತ್ತೊಯ್ಯುವ 24 ಬೋಗಿಗಳುಳ್ಳ ರೈಲು.
ಇವುಗಳಲ್ಲಿ ಎಸಿ ಮತ್ತು ನಾನ್ ಎಸಿ ಕೋಚ್ಗಳಿವೆ, ಇದರ ಒಳಾಂಗಣವನ್ನು ಸಂಪೂರ್ಣವಾಗಿ ಮಾಡಿಫೈ ಮಾಡಲಾಗಿದೆ. ದೆಹಲಿಯ ಸಫ್ದರ್ಜಂಗ್ ಸ್ಟೇಶನ್ನಿನಲ್ಲಿ ಇವುಗಳ ಗುಣಮಟ್ಟವನ್ನು ಪ್ರಭು ಅವರು ಪರೀಕ್ಷಿಸಿದರು.
ಎಲ್ಇಡಿ ಆಧಾರಿತ ಬರ್ತ್ ಇಂಡಿಕೇಟರ್ನ್ನು ಇದರಲ್ಲಿ ಅಳವಡಿಸಲಾಗಿದೆ. ನಾನ್ ಎಸಿ ಕೋಚ್ಗಳನ್ನು ಮಾಡಿಫೈ ಮಾಡಲು 16 ಲಕ್ಷ ತಗುಲಿದರೆ, ಎಸಿ ಕೋಚ್ಗಳಿಗೆ 22 ಲಕ್ಷ ವೆಚ್ಚವಾಗಿದೆ. ಎಲೆಕ್ಟ್ರಿಕ್ ಆಧಾರಿತ ಚಿಮ್ನಿ, ಬೆಂಕಿ ನಂದಿಸುವ ಸಾಧನ, ಲಗೇಜ್ ಕಾಂಪಾರ್ಟ್ಮೆಂಟ್ನಲ್ಲಿ ಸ್ಟೇನ್ಲೆಸ್ ಸ್ಟೀಲ್ ಮುಂತಾದುವುಗಳನ್ನು ಅಳವಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.