ನವದೆಹಲಿ: ಜಲ್ಲಿಕಟ್ಟುವನ್ನು ಈ ವರ್ಷ ಆಚರಣೆ ಮಾಡಬಾರದು ಎಂದು ಸುಪ್ರೀಂಕೋರ್ಟ್ ಮಂಗಳವಾರ ಆದೇಶಿಸಿದ್ದು, ಕೇಂದ್ರದ ಅನುಮತಿಗೆ ತಡೆ ನೀಡಿದೆ.
ಜಲ್ಲಿಕಟ್ಟುವಿಗೆ ಕೇಂದ್ರ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ತೀರ್ಪನ್ನು ನೀಡಿದೆ.
ಕೇಂದ್ರದ ಅನುಮತಿ ದೊರೆತ ಹಿನ್ನಲೆಯಲ್ಲಿ ಸಂಭ್ರಮದಿಂದ ಇದ್ದ ತಮಿಳುನಾಡು ಜನತೆಗೆ ಸುಪ್ರೀಂ ನಿರ್ಧಾರ ದೊಡ್ಡ ಆಘಾತವನ್ನು ನೀಡಿದೆ.
ಪ್ರತಿ ಪೊಂಗಾಲ್ ಹಬ್ಬದಲ್ಲಿ ಜಲ್ಲಿಕಟ್ಟನ್ನು ಆಚರಿಸಲಾಗುತ್ತದೆ. ಈ ಬಾರಿ ಜ.14ಕ್ಕೆ ಪೊಂಗಾಲ್ ಹಬ್ಬವಿದೆ ತಮಿಳಿಗರು ಜಲ್ಲಿಕಟ್ಟು ಇಲ್ಲದೆಯೇ ಇದನ್ನು ಆಚರಿಸಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.