ಮಂಗಳೂರು : ನಗರದ ಖ್ಯಾತ ಉದ್ಯಮಿ, ಸಮಾಜ ಸೇವಕ ಹಾಗೂ ರೋಟಾರಿ ಸೇರಿದಂತೆ ವಿವಿಧ ಸಂಘ – ಸಂಸ್ಥೆಗಳಲ್ಲಿ ಮೂಂಚೂಣಿಯಲ್ಲಿ ಗುರುತಿಸಿಕೊಂಡಿರುವ ರಾಜ್ಗೋಪಾಲ್ ರೈಯವರ ಮಾಲಕತ್ವದ ಭಗವಾ ಎಂಟರ್ಪ್ರೈಸಸ್ ಸಂಸ್ಥೆ ( ಕೆಟರಿಂಗ್ಸ್ – ಎರೆಂಜರ್ಸ್ – ರಿಯಲ್ ಎಸ್ಟೇಟ್ ) ಯ ನೂತನ ಕಚೇರಿ ಸೋಮವಾರ ನಗರದ ವಿಶ್ವಭವನದ ಕರುಣಾಧಾಮ ಕಟ್ಟಡದಲ್ಲಿ ಶುಭಾರಂಭಗೊಂಡಿತು.
ಆರ್.ಎಸ್.ಎಸ್ ಮುಖಂಡ ಡಾ. ಪ್ರಭಾಕರ್ ಭಟ್, ವಿಶ್ವಹಿಂದೂ ಪರಿಷತ್ ಮುಖಂಡ ಪ್ರೋ.ಎಂ.ಬಿ.ಪುರಾಣಿಕ್, ಸಂಸದ ನಳಿನ್ ಕುಮಾರ್ ಕಟೀಲ್, ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ನ ಸ್ಥಾಪಕರು ಹಾಗೂ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ರಾಜ್ಗೋಪಾಲ್ ರೈಯವರ ಸಹೋದರ ಮುಂಬಾಯಿ ಉದ್ಯಮಿ ಶೇಖರ್ ರೈ ಮುಂತಾದವರು ದೀಪ ಬೆಳಗಿಸುವ ಮೂಲಕ ನೂತನ ಕಚೇರಿಯನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು.
ಉದ್ಘಾಟನಾ ಸಂದೇಶ ನೀಡಿದ ಡಾ. ಪ್ರಭಾಕರ್ ಭಟ್ ಅವರು, ಕಳೆದ ಹಲವು ವರ್ಷಗಳಿಂದ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸತತವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಸೇವೆ ಮಾಡುತ್ತಿರುವ ರಾಜ್ಗೋಪಾಲ್ ರೈಯವರು ತಮ್ಮ ಜೀವನೊಪಯಕ್ಕಾಗಿ 30 ವರ್ಷಗಳ ಹಿಂದೆ ಕೇಟರ್ಸ್ ಉದ್ಯಮವನ್ನು ಪ್ರಾರಂಭಿಸಿ, ಸತತ ಪರಿಶ್ರಮಗಳ ಮೂಲಕ ಯಶಸ್ಸುಗಳಿಸಿದ್ದಾರೆ. ಎಲ್ಲರ ಜೊತೆ ಉತ್ತಮ ಭಾಂಧವ್ಯ ಹೊಂದಿರುವ ರಾಜ್ಗೋಪಾಲ್ ರೈಯವರು ಎಲ್ಲರ ಅಭಿರುಚಿಗೆ ತಕ್ಕಂತೆ ಕಾಲಕಾಲಕ್ಕೆ ಅನುಗುಣವಾಗಿ ಅಹಾರ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು ಶುಚಿತ್ವಕ್ಕೆ ಹೆಚ್ಚು ಮಹತ್ವ ನೀಡುವ ಜೊತೆಗೆ ಅಹಾರದ ಗುಣಮಟ್ಟದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರು ಉದ್ಯಮ ಕ್ಷೇತ್ರದಲ್ಲಿ ಮತ್ತಷ್ಟು ಯಶಸ್ಸು ಕಾಣಲಿ ಎಂದು ಶುಭಾ ಹಾರೈಸಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಜನಮನ್ನಣೆಗೆ ಪಾತ್ರವಾಗಿರುವ ಕೇಟರಿಂಗ್ಸ್ ಉದ್ಯಮದ ಜೊತೆಗೆ ಇದೀಗ ರಿಯಲ್ ಎಸ್ಟೇಟ್ ವ್ಯವಹಾರದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ರಾಜ್ಗೋಪಾಲ್ ರೈವರ ಉದ್ಯಮವು ಮತ್ತಷ್ಟು ವಿಸ್ತಾರವಾಗಿ ಅಭಿವೃದ್ಧಿ ಹೊಂದಲಿ ಎಂದು ಹೇಳಿ ಶುಭಾ ಸಂಸನೆಗೈದರು.
ಉದ್ಯಮಿಗಳಾದ ಕರುಣಾಕರ್, ರವಿರಾಜ್ ಶೆಟ್ಟಿ, ಶ್ರೀಮತಿ ಪೂರ್ಣಿಮ ರಾಜ್ಗೋಪಾಲ್ ರೈ ಹಾಗೂ ನಗರದ ಖ್ಯಾತ ಉದ್ಯಮಿಗಳು, ಸಂಘ – ಸಂಸ್ತೆಗಳ ಮುಖಂಡರು, ರಾಜಕೀಯ ನಾಯಕರು, ಹೋಟೇಲ್ ಉದ್ಯಮಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರಾಜ್ಗೋಪಾಲ್ ರೈ ಸ್ವಾಗತಿಸಿದರು. ಪುರುಷೋತ್ತಮ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.