ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಯ ಕುರಿತು ವಿಶಾಲ ದೃಷ್ಟಿಕೋನ ಹೊಂದಿದ್ದು, ಅದನ್ನು ನೈಜ ರೂಪಕ್ಕೆ ತರಲು ಸರಿಯಾದ ವೈಜ್ಞಾನಿಕ ಸಲಹೆ ಅಗತ್ಯವಿದೆ. ಜೊತೆಗೆ ಹಲವು ಯೋಜನೆಗಳನ್ನು ಪ್ರಾರಂಭಿಸಬೇಕಿದೆ ಎಂದು ಭಾರತ ರತ್ನ ಪ್ರಶಸ್ತಿ ವಿಜೇತ ಸಿಎನ್ಆರ್ ರಾವ್ ಅಭಿಪ್ರಾಯಪಟ್ಟಿದ್ದಾರೆ.
ಸಂದರ್ಶನವೊಂದರಲ್ಲಿ ಭಾಗವಹಿಸಿದ ಅವರು ಧರ್ಮ, ಅಸಹಿಷ್ಣುತೆ, ಮದರ್ ಥೇರೇಸಾರ ಸನ್ಯಾಸತ್ವದ ಬಗ್ಗೆ ಮೋದಿ ಅವರ ವೈಜ್ಞಾನಿಕ ನೀತಿನ್ನುದ್ದೇಶಿಸಿ ಮಾತನಾಡಿದ ಅವರು, ಉತ್ತಮ ಸಲಹೆ ಮತ್ತು ಕಲ್ಪನೆಗಳಿಂದ ದೇಶಕ್ಕಾಗಿ ಏನನನಾದರೂ ಮಾಡಲು ಮಾಡಲು ಬಯಸಿದ್ದಾರೆ. ಅವರ ವಿಚಾರಗಳಿಗೆ ನಾವು ಸಹಕರಿಸಬೇಕು ಎಂದು ಹೇಳಿದ್ದಾರೆ.
ಓರ್ವ ವ್ಯಕ್ತಿ ಅಥವ ಸಚಿವಾಲಯವು ಏಕಾಂಗಿಯಾಗಿ ಯಾವುದೇ ವೈಜ್ಞಾನಿಕ ಅಥವಾ ಸಾಮಾಜಿಕ ಸಮಸ್ಯೆಗಳನ್ನು ನಿಭಾಯಿಸಲು ಸಾಧ್ಯವಿಲ್ಲ. ಪ್ರಧಾನಿ ಮೋದಿ ಅವರು ಉತ್ತಮ ಸಲಹೆಗಳನ್ನು ಪಡೆಯಲು ಸರಿಯಾದ ಸಲಹೇಗಾರರನ್ನು ಹೊಂದಬಹುದು. ವಿಜ್ಞಾನದ ಸಹಾಯದಿಂದ ಬಡತನ ಮತ್ತು ಒತ್ತಡದ ಸಮಸ್ಯೆಗಳನ್ನು ನಿಭಾಯಿಸುತ್ತ ವಿಶ್ವದ ಇತರ ರಾಷ್ಟ್ರಗಳೊಂದಿಗೆ ಸ್ಪರ್ಧಿಸಲು ಸಾಧ್ಯ. ಪ್ರಧಾನಿ ಮೋದಿ ಅವರಲ್ಲಿ ಈ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ.
ಮೋದಿ ಹಲವು ಸಂಸ್ಥೆಗಳಿಗೆ ನಿಧಿಗಳನ್ನು ಬಿಡುಗಡೆ ಮಾಡಬೇಕು. ಇದರಿಂದ ಸಂಸ್ಥೆಗಳು ತಮ್ಮ ಮೂಲಭೂತ ಸೌಕರ್ಯ ಮತ್ತು ಪ್ರಯತ್ನಗಳಿಗೆ ಸಹಾಯಕವಾಗಬೇಕು. ಹೊಸ ಉಪಕರಣಗಳು, ಹಲವು ರೋಗಗಳಿಗೆ ಔಷಧಗಳ ಸಂಷೋಧನೆ, ಹೊಸ ತಂತ್ರಜ್ಞಾನಗಳ ಸಣ್ಣ ಮಟ್ಟಿನ ವೈಜ್ಞಾನಿಕ ಸಂಶೋಧನೆಗಳಿಗೆ ನಿಧಿ ಸಹಾಯ ಮಾಡುವ ಮೂಲಕ ವಿಜ್ಞಾನವನ್ನು ಅಭಿವೃದ್ಧಿ ಪಡಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಅನಕ್ಷರತೆ ಹಾಗೂ ಮಲೇರಿಯಾ ರೋಗ ನಿರ್ಮೂಲನೆ, ಶುದ್ಧ ಕುಡಿಯುವ ನೀರು, ಉತ್ತಮ ಗುಣಮಟ್ಟದ ಬೀಜಗಳು ಮುಂತದ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.