ದೆಹರಾದುನ್: ಹರಿದ್ವಾರದ ಗಂಗಾ ನದಿ ತೀರದಲ್ಲಿ ಪ್ರಾರಂಭವಾಗಿರುವ ಅರ್ಧ ಕುಂಭ ಮೇಳದಲ್ಲಿ ಭಾಗವಹಿಸುವ ಭಕ್ತಾದಿಗಳಿಗೆ ಉಚಿತ ವೈಫೈ ಸೌಲಭ್ಯ ಒದಗಿಸಲಾಗುವುದು ಎಂದು ಬಿಎಸ್ಎನ್ಎಲ್ ಸಹ ಪ್ರಧಾನ ಕಾರ್ಯದರ್ಶಿ ರಮೇಶ್ ಕುಮಾರ್ ಹೇಳಿದ್ದಾರೆ.
ಜನಪ್ರಿಯ ಹರ್-ಕಿ-ಪೈರಿ ಘಾಟ್ನಲ್ಲಿ ಕಾರ್ಯಗತಗೊಳಿಸಿರುವ ವೈಫೈ ಸೇವೆಯನ್ನು ಭಕ್ತರು ಇಂಟರ್ನೆಟ್ ಮೂಲಕ ತಮ್ಮ ಆಪ್ತರೊಂದಿಗೆ ಈ ಧಾರ್ಮಿಕ ಮೇಳದ ಅನುಭವವನ್ನು ಹಂಚಿಕೊಳ್ಳಲು ಸಹಾಯಕವಾಗಲಿದೆ ಎಂದು ಅವರು ಹೇಳಿದ್ದಾರೆ.
ಟೈಮ್ಯಾಕ್ಸ್ ಸಹಯೋಗದಲ್ಲಿ ಪ್ರಾರಂಭಿಸಲಾದ ಉಚಿತ ವೈಫೈ ಸೇವೆ ಎಪ್ರಿಲ್ನಲ್ಲಿ ಸಂಪನ್ನಗೊಳ್ಳುವ ನಾಲ್ಕು ತಿಂಗಳ ಕುಂಭ ಮೇಳದ ಸಂದರ್ಭ ಹರ್-ಕಿ-ಪೈರಿಯಲ್ಲಿ ಭಕ್ತರು ಪಡೆಯಬಹುದು. ಮೇಳದ ಬಳಿಕವು ಈ ಸೇವೆ ಒದಗಿಸಲಾಗುವುದು ಎಂದು ಬಿಎಸ್ಎನ್ಎಲ್ ತಿಳಿಸಿದೆ. ಭಕ್ತಾದಿಗಳು ತಮ್ಮ ಮೊಬೈಲ್ ವೈಫೈ ಸಹಾಯದಿಂದ ರಾಜ್ಯದ ಬಿಎಸ್ಎನ್ಎಲ್ ಸೇವೆಯನ್ನು ಆಯ್ಕೆ ಮಾಡಿ ವೈಫೈ ಸೇವೆಯನ್ನು ಪಡೆಯಬಹುದು ಎಂದು ಓರ್ವ ಅಧಿಕಾರಿ ತಿಳಿಸಿದ್ದಾರೆ.
ಹರಿದ್ವಾರದ ಗಂಗಾ ನದಿ ತೀರದಲ್ಲಿ ಅರ್ಧ ಕುಂಭ ಮೇಳವು ಜನವರಿ 1 ರಂದು ಪ್ರಾರಂಭವಾಗಿದ್ದು, ಏಪ್ರಿಲ್ ವರೆಗೆ ನಡೆಯಲಿದೆ. ಜನವರಿ 14 ರ ಮಕರ ಸಂಕ್ರಾಂತಿಯಂದು ಮೊದಲ ಪುಣ್ಯ ಸ್ನಾನವು ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.