ಸವಣೂರು: ವಿಕಲ ಚೇತನರು ಸಮಾಜದ ಮುಖ್ಯವಾಹಿನಿಗೆ ಬರಲು ಸಮಾಜದ ಪ್ರೋತ್ಸಾಹ ಅಗತ್ಯ. ವಿಕಲಚೇತನರ ಸೇವೆ ದೇವರ ಸವೆಗೆ ಸರಿಸಮಾನ ಎಂದು ಸವಣೂರು ಗ್ರಾ.ಪಂ. ಅಧ್ಯಕ್ಷೆ ಬಿ.ಕೆ.ಇಂದಿರಾ ಕಲ್ಲೂರಾಯ ಹೇಳಿದರು.
ಅವರು ಸವಣೂರು ಅಶ್ವಿನಿ ಫಾರ್ಮ್ಸ್ನಲ್ಲಿ ಸವಣೂರು ಜೆ.ಸಿ.ಐ, ಸವಣೂರು ಯುವಕ ಮಂಡಲ, ಸವಣೂರು ಅಶ್ವಿನಿ ಗ್ರಾಮ ವಿಕಾಸ ಪ್ರತಿಷ್ಠಾನದ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ವಿಕಲಚೇತನ ಮಕ್ಕಳ ಪ್ರಕೃತಿ ಅಧ್ಯಯನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಸವಣೂರು ಅಶ್ವಿನಿ ಗ್ರಾಮ ವಿಕಾಸ ಪ್ರತಿಷ್ಠಾನದ ಅಧ್ಯಕ್ಷೆ ಕಸ್ತೂರಿ ಪ್ರಭು, ಸಂಚಾಲಕ ರಾಜಾರಾಮ ಪ್ರಭು, ಐ.ಇ.ಆರ್.ಟಿ ದೇವಕಿ ಜೆ.ಜಿ, ಬಿಆರ್ಪಿ ದಿನೇಶ್ ಗೌಡ, ವಿಕಲಚೇತನ ಮಕ್ಕಳ ವಿಶೇಷ ಶಿಕ್ಷಕರಾದ ಶಶಿಕಲಾ, ಸುಪ್ರಿಯಾ, ಪುತ್ತೂರು ಕೊಂಬೆಟ್ಟು ಸ.ಪ್ರೌ.ಶಾಲಾ ಚಿತ್ರಕಲಾ ಶಿಕ್ಷಕ ಜಗನ್ನಾಥ, ಸವಣೂರು ಹಿ.ಪ್ರಾ.ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಕೆ., ಗ್ರಾ.ಪಂ. ಸದಸ್ಯ ಸತೀಶ್ ಬಲ್ಯಾಯ, ಸವಣೂರು ಗ್ರಾ.ಪಂ.ವಿಕಲ ಚೇತನರ ಸಂಯೋಜಕಿ ಚೈತ್ರಾ, ಸಾಮಾಜಿಕ ಮುಂದಾಳು ರಾಮಕೃಷ್ಣ ಪ್ರಭು, ಸವಣೂರು ಜೆಸಿಐ ಅಧ್ಯಕ್ಷ ಶಶಿಕುಮಾರ್ ಬಿ.ಎನ್ ಉಪಸ್ಥಿತರಿದ್ದರು.
ಶಿಬಿರದಲ್ಲಿ ರಂಗಕರ್ಮಿ ಕೃಷ್ಣಪ್ಪ ಬಂಬಿಲ ಮಕ್ಕಳಿಗೆ ರಂಗಗೀತೆ, ಜನಪದ ವೈವಿದ್ಯ ಕುರಿತು, ಅಶ್ವಿನಿ ಫಾರ್ಮ್ಸ್ ಮೇಲ್ವಿಚಾರಕ ವೀರಪ್ಪ ಗೌಡ ಬಿದಿರು ಕೃಷಿ, ಆಯರ್ವೇದ ಸಸ್ಯಗಳ ಕುರಿತು ಮಾಹಿತಿ ನೀಡಿದರು.
ಅಶ್ವಿನಿ ಪ್ರಭು ಸ್ವಾಗತಿಸಿ, ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.