ಬೆಳ್ತಂಗಡಿ: ಕೊಕ್ಕಡದಿಂದ ಪಟ್ರಮೆ ಕಡೆಗೆ ೩ ಕಿ.ಮೀ ರಸ್ತೆ ಮರುಡಾಮರೀಕರಣ ಕಾಮಗಾರಿ ಅರ್ಧದಲ್ಲೇ ನಿಲ್ಲಿಸಲಾಗಿದ್ದು, ಡಿ.ವೈ.ಎಫ್.ಐ ಇದನ್ನು ಖಂಡಿಸುತ್ತದೆ ಎಂದು ಪಟ್ರಮೆ ಘಟಕ ಖಂಡಿಸುತ್ತದೆ ಎಂದು ಘಟಕದ ಅಧ್ಯಕ್ಷ ವಸಂತ ಟೈಲರ್ ಹೇಳಿದರು.
ಹಲವು ಹೋರಾಟಗಳನ್ನು ನಡೆಸಿ ಕೊನೆಗೆ ಶಾಸಕರ ಕೋಟಾದಿಂದ ನವಾರ್ಡ್ನಿಂದ ಒಂದು ಕೋಟಿ ಮಂಜೂರುಗೊಳಿಸಿ, ಇನ್ನೂ 7 ಕೋಟಿ ಬಿಡುಗಡೆ ಮಾಡಲಾಗುವುದೆಂದು ಭರವಸೆ ನೀಡಿತ್ತು. ಅದರಂತೆ ಕೊಕ್ಕಡದಿಂದ ಪಟ್ರಮೆ ಕಡೆಗೆ 3 ಕಿ.ಮೀ ರಸ್ತೆ ಮರುಡಾಮರೀಕರಣ ಕಾಮಗಾರಿ ಪ್ರಾರಂಭವಾಗಿತ್ತು. ಪ್ರಾರಂಭದಲ್ಲೇ ಎಡವಿದ ಕೆಲಸಗಳನ್ನು ಗುರುತಿಸಿದ ಕೊಕ್ಕಡ ಪಟ್ರಮೆ ನಾಗರೀಕರು ಇಲಾಖೆಗೆ ತಿಳಿಸಿದರು. ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಇಲಾಖಾಧಿಕಾರಿಗಳು, ಕೊಕ್ಕಡ ಪಂಚಾಯತ್ ಅಧ್ಯಕ್ಷರು, ಕೊಕ್ಕಡ ಸೊಸೈಟಿ ಅಧ್ಯಕ್ಷರು ಹಾಗೂ ಡಿ.ವೈ.ಎಫ್.ಐ ಮುಖಂಡ ಮತ್ತು ಪಟ್ರಮೆ ಗ್ರಾಮ ಪಂಚಾಯತ್ ಸದಸ್ಯರು ಸಿಪಿಐ(ಎಂ) ಮುಖಂಡರೂ ಆದ ಶ್ಯಾಮರಾಜ ಅವರ ಜೊತೆ ಊರವರ ಸಮಕ್ಷಮ ಮಾತುಕತೆ ನಡೆಸಿ ಕೆಲಸ ಪೂರ್ಣಗೊಳಿಸುವ ಭರವಸೆ ನೀಡಿದ್ದರು.
ಆದರೆ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗ ಕೆಲಸವನ್ನೇ ನಿಲ್ಲಿಸಿದ್ದು ಇದರ ಕಾರ್ಯವೈಖರಿಯನ್ನು ಡಿ.ವೈ.ಎಫ್.ಐ ಖಂಡಿಸಿದೆ. ಜನವರಿ ಮೊದಲ ವಾರದಲ್ಲಿ ಕೆಲಸ ಪ್ರಾರಂಭವಾಗದಿದ್ದರೆ ದ.ಕ.ಜಿಲ್ಲಾ ಪಂಚಾಯತ್, ಬೆಳ್ತಂಗಡಿ ಉಪವಿಭಾಗ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲು ಡಿ.ವೈ.ಎಫ್.ಐ ಪಟ್ರಮೆ ಘಟಕ ನಿರ್ಧರಿಸಿದೆ ಎಂದವರು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.