ಡೆಹ್ರಾಡೂನ್: ತನ್ನ ಉತ್ಪನ್ನಗಳ ವಿರುದ್ಧ ಫತ್ವಾ ಹೊರಡಿಸಿದ ತಮಿಳುನಾಡಿನ ಮುಸ್ಲಿಂ ಸಂಘಟನೆಯ ವಿರುದ್ಧ ಪತಂಜಲಿ ಸಂಸ್ಥೆ ಕಿಡಿಕಾರಿದೆ. ಫತ್ವಾ ಹೊರಡಿಸಿದವರು ಭಾರತದ ಆರ್ಥಿಕ ಅಭಿವೃದ್ಧಿ ಮತ್ತು ಕೋಮು ಸಾಮರಸ್ಯದ ವಿರೋಧಿಗಳು ಎಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯೋಗಗುರು ರಾಮ್ದೇವ್ ಬಾಬಾರವರ ಆಪ್ತ ಆಚಾರ್ಯ ಬಾಲಕೃಷ್ಣ, ‘ಪತಂಜಲಿ ಹರಿದ್ವಾರದಲ್ಲಿ 5,000 ಮುಸ್ಲಿಮರು ಉದ್ಯೋಗ ಮಾಡುತ್ತಿದ್ದಾರೆ. ಭವಿಷ್ಯದಲ್ಲೂ ನಾವು ಜಾತಿ, ಧರ್ಮವನ್ನು ನೋಡದೇ ಉದ್ಯೋಗಿಗಳನ್ನು ನೇಮಿಸುತ್ತೇವೆ’ ಎಂದಿದ್ದಾರೆ.
ಪತಂಜಲಿಯ ಒಟ್ಟು 800 ಉತ್ಪನ್ನಗಳಿದ್ದು, ಇದರಲ್ಲಿ 5 ಉತ್ಪನ್ನಗಳಲ್ಲಿ ಮಾತ್ರ ಗೋಮೂತ್ರವಿದೆ. ಗೋಧನ್ ಅರ್ಕ, ಕಾಯಕಲ್ಪ ಎಣ್ಣೆ, ಪಂಚಗವ್ಯ ಸೋಪ್, ಪೆನ್ಯಲ್ ಮತ್ತು ಸಂಜೀವಿನಿ ವಾತಿ ಮಾತ್ರ ಗೋಮೂತ್ರವನ್ನು ಒಳಗೊಂಡಿದೆ ಎಂದಿದ್ದಾರೆ.
ಹರಿದ್ವಾರದಲ್ಲಿ ಹೆಚ್ಚಿನ ಮುಸ್ಲಿಮರು ಪತಂಜಲಿ ಉತ್ಪನ್ನಗಳನ್ನು ಖರೀದಿಸುತ್ತಾರೆ, ಅದನ್ನು ತಯಾರಿಸುವವರು ಅವರೇ, ಅತೀ ಕಡಿಮೆ ಬೆಲೆಯಾದ್ದರಿಂದ ಖರೀದಿಯನ್ನೂ ಮಾಡುತ್ತಾರೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.